ಕಾಸರಗೋಡು: ದೇಶದ ಐಕ್ಯತೆ ಮತ್ತು ಸಾಮರಸ್ಯವನ್ನು ಒಡೆಯಲು ನರೇಂದ್ರ ಮೋದಿ ನೇತೃತ್ವದ ಸರಕಾರ ಯತ್ನಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ವಿ.ಎಂ ಸುಧೀರನ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಜನಪಕ್ಷ ಯಾತ್ರೆಯನ್ನು ಕುಂಬಳೆಯಲ್ಲಿ ಪಕ್ಷದ ಧ್ವಜವನ್ನು ಸುಧೀರನ್ ರವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನರೇಂದ್ರ ಮೋದಿಯವರು ಪ್ರಧಾನಿಯಾದೊಡನೆ ಜನಸಾಮಾನ್ಯರು ಅವರ ಮೇಲಿರಿಸಿದ್ದ ನಂಬಿಕೆಗಳು ಇದೀಗ ಹುಸಿಯಾಗತೊಡಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ. ಈಗಾಗಲೇ ನಡೆದ ಚುನಾವಣಾಯಲ್ಲಿ ಬಿಜೆಪಿಗೆ ಸೋಲು ಉಂಟಾಗಿದ್ದು, ಇದು ಜನತೆ ನೀಡಿದ ಉತ್ತರ ಎಂದರು.
ಗೃಹ ಸಚಿವ ರಮೇಶ್ ಚೆನ್ನಿತ್ತಲ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ಐಕ್ಯರಂಗ ಸಂಚಾಲಕ ಪಿ.ಪಿ.ತಂಗಚ್ಚನ್, ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಡಿ.ಸುರೇಶನ್, ಸಚಿವರಾದ ತಿರುವಾಂಜೂರು ರಾಧಾಕೃಷ್ಣನ್, ಕೆ.ಬಾಬು, ಸಂಸದರಾದ ಎಂ.ಕೆ.ರಾಘವನ್, ಆಂಟೋ ಆಟೋನಿ, ಕರ್ನಾಟಕ ಅರಣ್ಯ ಸಚಿವ ಬಿ.ರಮಾನಾಥ ರೈ, ಗ್ರಾಮೀಣಾಭಿವೃದ್ದಿ ಸಚಿವ ವಿನಯಕುಮಾರ್ ಸೊರಕೆ, ಹಿರಿಯ ಮುಖಂಡ ಪಿ.ಸಿ.ಚಾಕೋ, ಮುಖಂಡರುಗಳಾದ ಪಿ.ಸಿ.ಥೋಮಸ್,ಕೆ.ಪಿ.ಅನಿಲ್ ಕುಮಾರ್, ವತ್ಸಲಾ ಪ್ರಸನ್ನಕುಮಾರ್, ರಾಜಮೋಹನ್ ಉಣ್ಣಿತ್ತಾನ್, ಪಿ.ಸಿ.ವಿಷ್ಣುನಾಥನ್, ಸುಮಾ ಬಾಲಕೃಷ್ಣನ್, ಎ.ಸಿ.ಜೋಸ್, ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಸಾಕ್, ರಾಜ್ಯ ಕಾಂಗ್ರೆಸ್ಸ್ ನಾಯಕರು, ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ .ಸಿ.ಕೆ.ಶ್ರೀಧರನ್ ಸ್ವಾಗತಿಸಿದರು. ಟಿ.ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ವೀರ ಮರಣವನ್ನಪ್ಪಿದ ಧೀರ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿ ಮೌನ ಪ್ರಾರ್ಥನೆ ನಡೆಸಲಾಯಿತು.