News Kannada
Wednesday, July 06 2022

ಕರಾವಳಿ

ನೇತ್ರಾವತಿ ಕಲುಷಿತ: ಸೂಕ್ತ ಕ್ರಮ ಅಗತ್ಯ - 1 min read

Photo Credit :

ನೇತ್ರಾವತಿ ಕಲುಷಿತ: ಸೂಕ್ತ ಕ್ರಮ ಅಗತ್ಯ

ಬಂಟ್ವಾಳ: ದೊಡ್ಡದಾದ ಬೋರ್ಡ್.. ನದಿ ನೀರನ್ನು ಕಲುಷಿತಗೊಳಿಸಬೇಡಿ ಎನ್ನುವ ಬುದ್ದಿಮಾತು… ಆದರೆ ಜಾಗೃತಿಯೇ ಇಲ್ಲ.. ದಿನವಿಡೀ ನೇತ್ರಾವತಿ ಕಲುಷಿತಗೊಳ್ಳುವುದು ಮಾತ್ರ ತಪ್ಪಿಲ್ಲ.. ಸ್ಥಳೀಯಾಡಳಿತವಾಗಲಿ, ಅಧಿಕಾರಿಗಳಾಗಲೀ ಸ್ವಚ್ಚತೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಂಡರು, ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಜನ ಅದಕ್ಕೆ ಸ್ಪಂದನೆ ನೀಡುವುದು ಕಡಿಮೆ ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ.


“ನೇತ್ರಾವತಿ ನೀರನ್ನು ಕಲುಷಿತಗೊಳಿಸಬಾರದು ಅದನ್ನು ಕುಡಿಯಲು ಉಪಯೋಗಿಸಲಾಗುತ್ತದೆ” ಎಂದು ಜಿಲ್ಲಾಡಳಿತದ ಆದೇಶವಿದ್ದರೂ ಅದನ್ನು ಧಿಕ್ಕರಿಸಿ ಇಲ್ಲಿ ನೀರನ್ನು ಮಲಿನಗೊಳಿಸುವುದು ದಿನೇ ದಿನೇ ಜಾಸ್ತಿಯಾಗುತ್ತದೆ. ನದೀ ನೀರಿನಲ್ಲಿ ಸ್ನಾನ ಮಾಡಬಾರದು, ದನಗಳನ್ನು ತೊಳೆಯಬಾರದು, ಪಾತ್ರೆ ತೊಳೆಯಬಾರದು ಎಂದು ಜಿಲ್ಲಾಧಿಕಾರಿಯವರ ಆದೇಶದ ಬೋರ್ಡನ್ನು ತಹಶೀಲ್ದಾರರು ಹಾಕಿದ್ದಾರೆ. ಜೊತೆಗೆ ಪುರಸಭೆ ಕೂಡಾ ಇದೇ ರೀತಿಯ ಬೋರ್ಡನ್ನು ಇಲ್ಲಿ ಹಾಕಿದೆ. ಆದರೆ ಬೋರ್ಡು ಹಾಕಿದ ಬಳಿಕ ಪುರಸಭೆಯ ಮುಖ್ಯಾಧಿಕಾರಿ ಮತ್ತು ದಂಡಾಧಿಕಾರಿಯವರು ಅತ್ತ ಕಡೆ ಹೋಗಿಲ್ಲ ಎಂಬುದನ್ನು ಅಲ್ಲಿ ನಡೆಯುತ್ತಿರವ ಸನ್ನಿವೇಶಗಳೇ ಸಾರಿ ಹೇಳುತ್ತಿವೆ.

ಇತ್ತೀಚಿನ ದಿನಗಳಲ್ಲಿ ಬಿಹಾರ ಮೂಲದ ವ್ಯಕ್ತಿಗಳು ಮತ್ತು ಕುಟುಂಬವೇ ಇಲ್ಲಿ ಬೀಡು ಬಿಟ್ಟಿವೆ. ಕಟ್ಟಡ ಕೆಲಸಕ್ಕೆ ಅವರೇ ಬೇಕು. ರಸ್ತೆ ಕೆಲಸದಿಂದ ಹಿಡಿದು ಎಲ್ಲಾ ಕೆಲಸಕ್ಕೆ ಇಲ್ಲಿನ ಗುತ್ತಿಗೆದಾರರು ಅವರನ್ನು ಕರೆತರುತ್ತಾರೆ. ಗುತ್ತಿಗೆದಾರರು ಕಡಿಮೆ ಸಂಬಳ ನೀಡಿ ಅವರನ್ನು ದ.ಕ.ಜಿಲ್ಲೆಗೆ ತರಿಸಿರುತ್ತಾರೆ ಮಾತ್ರವಲ್ಲದೆ, ರಾತ್ರಿ ತಂಗಲು ಸರಿಯಾದ ಮನೆ ನೀಡದೆ ಅವರು ಸಿಕ್ಕಿದಲ್ಲಿ ರಾತ್ರಿ ಕಳೆಯುತ್ತಾರೆ ಎಂದು ದೂರುಗಳು ಕೇಳಿ ಬರುತ್ತದೆ. ಬಂಟ್ವಾಳದ ನೇತ್ರಾವತಿ ನದಿಯ ಗೂಡಿನ ಬಳಿ ಸುಣ್ಣದ ಗೂಡಿನಲ್ಲಿ ಇದೇ ರೀತಿ ಅಸುಪಾಸಿನಲ್ಲಿ ಕಟ್ಟಡ ಕೆಲಸಕ್ಕೆಂದು ಬಂದ ನೂರಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಸ್ಥಳೀಯ ಗುತ್ತಿಗೆ ದಾರ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ನೂರಾರು ಮಂದಿಯನ್ನು ಕಟ್ಟಡ ಕೆಲಸಕ್ಕೆ ಕರೆಸಿಕೊಂಡಿದ್ದಾರೆ, ಆದರೆ ಅವರಿಗೆ ವಾಸ ಮಾಡಲು ಸರಿಯಾದ ವ್ಯವಸ್ಥೆ ಮಾಡದೇ ಅವರು ನೇತ್ರಾವತಿ ನದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಪುರಸಭೆಯ ಜಾಗದಲ್ಲಿ ನಿರ್ಮಿಸಲಾದ ಸುಣ್ಣದ ಗೂಡೇ ವಾಸ ಸ್ಥಳ. ಅವರಿಗೆ ಇಲ್ಲಿ ಶೌಚಾಲಯವಿಲ್ಲ ಹಾಗಾಗಿ ನೇತ್ರಾವತಿ ನದಿಯೇ ಇವರಿಗೆ ಶೌಚಾಲಯ, ಬಟ್ಟೆ ತೊಳೆಯಲು ನದಿಯೇ ಆಸರೆ. ಪಾತ್ರೆಯಿಂದ ಹಿಡಿದು, ಸ್ನಾನ ಹೀಗೆ ದೈನಂದಿನ ಎಲ್ಲಾ ಚಟುವಟಿಕೆಗಳು ಇಲ್ಲೇ ನಡೆಯುತ್ತದೆ. ಜೊತೆಗೆ ರಾತ್ರಿ ಹೊತ್ತಲ್ಲಿ ಇದೇ ಜಾಗದಲ್ಲಿ ಅನೈತಿಕ ಚಟುವಟಿಕೆ ಕೂಡಾ ನಡೆಯುತ್ತದೆ ಎನ್ನುವ ಆರೋಪಗಳೂ ಕೂಡ ಕೇಳಿಬಂದಿದೆ. ರಾತ್ರಿ ಹೊತ್ತಲ್ಲಿ ಗಲಾಟೆಗಳು ನಡೆದು ಪರಿಸರದ ಶಾಂತಿ ಕದಡುತ್ತದೆ ಎನ್ನುವ  ದೂರುಗಳಿವೆ.

ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿ ಮತ್ತು ಪುರಸಭೆ ಜಂಟಿ ಕಾರ್ಯಾಚರಣೆ ನಡೆಸಿ ನದಿನೀರು ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾದ ತುರ್ತು ಅಗತ್ಯತೆ ಇದೆ.

See also  ಕರಾವಳಿಯಲ್ಲಿ ಧಾರಾಕಾರ ಮಳೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು