ಬಂಟ್ವಾಳ: ಓಟು ಬೇಕಾದರೆ ರಸ್ತೆ ದುರಸ್ಥಿ ಮಾಡಿ ಎಂಬ ಸ್ಪಷ್ಟ ಸಂದೇಶ ವನ್ನು ಜನಪ್ರತಿನಿಧಿಗಳಿಗೆ ನೀಡಿರುವ ವಿಟ್ಲ ಸಮೀಪದ ಅನಿಲಕಟ್ಟೆ ನಾಗರೀಕರು, ಓಟು ಕೇಳಲು ಬರಬೇಡಿ ಎಂಬ ಬ್ಯಾನರ್ ಅನ್ನೂ ಅಳವಡಿಸಿದ್ದಾರೆ.
ಇಲ್ಲಿಯದು ಮಣ್ಣಿನ ರಸ್ತೆಯಾಗಿದ್ದು ಸಂಚಾರಕ್ಕೆ ಅಯೋಗ್ಯವಾಗಿದ್ದ ಅನಿಲಕಟ್ಟೆ – ಕಡಂಬು ರಸ್ತೆಯನ್ನು ಧನಂಜಯ ಕುಮಾರ್ ಸಂಸದರಾಗಿದ್ದ ಸಂದರ್ಭದಲ್ಲಿ ಸಡಕ್ ಯೋಜನೆಯಡಿಯಲ್ಲಿ ಡಾಮರೀಕರಣಗೊಳಿಸಲಾಗಿತ್ತು. ಆ ಬಳಿಕ ಜಗನ್ನಾಥ ಸಾಲಿಯಾನ್ ಜಿ.ಪಂ ಉಪಾಧ್ಯಕ್ಷರಾಗಿದ್ದಾಗ 2 ಲಕ್ಷ ರೂಪಾಯಿ ಅನುದಾನದಲ್ಲಿ ದುರಸ್ತಿಗೊಳಿಸಲಾಗಿತ್ತು. ಆ ಬಳಿಕ ಈ ರಸ್ತೆಯನ್ನು ತಿರುಗಿ ನೋಡಿದವರಿಲ್ಲ. ವಿಚಾರಿಸುವಾಗ ಈ ರಸ್ತೆಯಲ್ಲಿ ವಿವಾದ ಇದೆ ಎಂಬ ನೆಪ ನೀಡುತ್ತಿದ್ದಾರೆ. ಆದರೆ ಅನಿಲಕಟ್ಟೆ ಶಾಲೆಯ ಗೇಟಿನವರೆಗೆ ಯಾವುದೇ ವಿವಾದ ಇಲ್ಲ. ಆದರೂ ಈ ರಸ್ತೆಯ ಗುಂಡಿಗಳನ್ನು ಮುಚ್ಚುವವರಿಲ್ಲ. ಇದರಿಂದ ಬೇಸತ್ತ ಅನಿಲಕಟ್ಟೆ ಕಡಂಬು ನಾಗರಿಕರು ಹಾಕಿರುವ
ಅನಿಲಕಟ್ಟೆ ಕಡಂಬು ರಸ್ತೆಯನ್ನು ದುರಸ್ತಿ ಮಾಡುವವರೇಗೆ ಈ ರಸ್ತೆಯನ್ನು ಬಳಸುವವರ ಮನೆಗಳಿಗೆ ಮತಯಾಚನೆಗೆ ಬರಬೇಡಿ ಎಂಬ ಬ್ಯಾನರ್ ಇದೀಗ ಗಮನಸೆಳೆಯುತ್ತಿದೆ.
ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅನಿಲಕಟ್ಟೆಯನ್ನು ಸಂಪರ್ಕಿಸುವ ಕಡಂಬು- ಕೂಡೂರು- ಅನಿಲಕಟ್ಟೆ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿ ಮಾಡಬೇಕಾದ ತುತರ್ು ಅಗತ್ಯವಿದೆ ಎಂದು ಸ್ಥಳೀಯ ನಿವಾಸಿ ಅಬೂಬಕ್ಕರ್ ಅನಿಲಕಟ್ಟೆ ಒತ್ತಾಯಿಸಿದ್ದಾರೆ.