ಮೂಡುಬಿದರೆ: ಕಾಂತಾವರ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ 67 ನೇ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಂತಾವರ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್.ಎಸ್ ವರ್ತಿ ಅವರು ಗ್ರಾಮೀಣ ಮಟ್ಟದ ಇಂತಹ ಶಾಲೆಗಳಲ್ಲಿ ಶೇ 100 ಫಲಿತಾಂಶ ದಾಖಲಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
ವಿದ್ಯಾ ಸಂಸ್ಥೆಯ ನಿರ್ದೇಶಕ ಬಿ.ಪದ್ಮನಾಭ ಗೌಡ ಮಾತನಾಡಿ ನಮ್ಮ ದೇಶ ಗಣರಾಜ್ಯವಾಗಿ 66 ವರ್ಷ ಕಳೆದರೂ ಇನ್ನೂ ಸಹ ನಾವು ಪರಿಪೂರ್ಣ ಅಭಿವೃದ್ಧಿ ಹೊಂದಿಲ್ಲ. ಮುಂದಿನ ಪ್ರಜೆಗಳಾದ ನಿಮ್ಮಿಂದ ಆ ಪರಿಪೂರ್ಣತೆ ದೊರಕಲಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿ ತಿಳಿಸಿದರು. ಇದೇ ಸಂದರ್ಭದಲ್ಲಿ ಚೆನ್ನೈಯಲ್ಲಿ ನಡೆದ ರಾಷ್ಟ್ರಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿ ಆಯುಶ್.ಆರ್.ಶೆಟ್ಟಿ ಇವರನ್ನು ಶೆಟಲ್ ಕಿಟ್ ನೀಡಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಬಿಎಸ್.ಇ ಯ ಪ್ರಾಂಶುಪಾಲ ಗಜಾನನ ಭಟ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಶೆಣೈ, ರಾಮ್ ಪ್ರಕಾಶ್ ಶೆಟ್ಟಿ, ಮಂಜುನಾಥ ಕಾಂತಾವರ , ವಿದ್ಯಾಸಂಸ್ಥೆಯ ಶಿಕ್ಷಕ ವರ್ಗದವರು ಮತ್ತು ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು. ಕಾಕ್ರಮವನ್ನು ಶಾಲಾ ಉಪ ಪ್ರಾಂಶುಪಾಲೆ ವೀಣಾ ಶೆಡಿಕಜೆ ನಿರೂಪಿಸಿದರು. ಶಿಕ್ಷಕಿ ಉಷಾ ಸ್ವಾಗತಿಸಿ, ಉಪನ್ಯಾಸಕಿ ಕೃಪಾ ವಂದಿಸಿದರು.