ಮಂಗಳೂರು: ಸುರತ್ಕಲ್ ನ ಜನತಾ ಕಾಲನಿಯಲ್ಲಿನ ಎರಡು ಗುಂಪುಗಳ ನಡುವಿನ ವಿವಾದ ಸೋಮವಾರ ತಡರಾತ್ರಿ ಪರಸ್ಪರ ಹಲ್ಲೆ ಮೂಲಕ ವಿಕೋಪಕ್ಕೆ ತಿರುಗಿದ್ದು , ನಾಲ್ವರು ಗಂಭಿರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧಾವ ಪೂಜಾರಿ(45 ) ಅನಿಲ (25 ) ಶಿವರಾಜ ಗಾಣಿಗ (19) ಮಧು ( 20 ಜಾನಕಿ ( 50 ) ಪದ್ಮವಾತಿ ಹಲ್ಲೆಗೊಳಗಾದವರು. ಪೂರ್ವ ದ್ವೇಷದ ಹಿನ್ನೆಲೆ ಘಟನೆಗೆ ಕಾರಣ ಎನ್ನಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಸ್ಥಳದಲ್ಲಿ ತಕ್ಷಣ ಪೊಲೀಸ್ ಭದ್ರತೆ ಬಿಗುಗೊಳಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂಜಾಗ್ರತೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ.
ಪ್ರಕರಣ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಜನತಾ ಕಾಲನಿಯಲ್ಲಿರುವ ಮನೆಯ ಮುಂದೆ ಕೆ.ಎಸ್.ಆರ್.ಪಿ ಮತ್ತು ಸುರತ್ಕಲ್ ಪೋಲಿಸರು ಜಮಾಯಿಸಿದ್ದು ಮಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.