ಮಂಗಳೂರು: ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೈದಿರುವ ಘಟನೆ ಕನೀರುತೋಟದ ಬಂಡಿಕೊಟ್ಯ ಎಂಬಲ್ಲಿ ಗುರುವಾರ ಮುಂಜಾನೆ ವೇಳೆ ನಡೆದಿದೆ.
ಕುಂಪಲದ ಕುಜುಮಗದ್ದೆ ನಿವಾಸಿ ಸುಂದರ್ ಪೂಜಾರಿ ಎಂಬವರ ಪುತ್ರಿ ಮೋಹಿನಿ(55) ಆತ್ಮಹತ್ಯೆಗೈದವರು. ಮನೆಯಿಂದ ತುಸು ದೂರದಲ್ಲಿರುವ ಕನೀರುತೋಟದ ಮಾವನ ಮನೆಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾವನ ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ತಿಳಿದುಕೊಂಡಿದ್ದ ಮೋಹಿನಿಯವರು ಅವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಪತಿ ಸಾವನ್ನಪ್ಪಿದ ಬಳಿಕ ಮಾನಸಿಕವಾಗಿ ಕಿನ್ನತೆಗೆ ಒಳಗಾಗಿದ್ದ ಇವರು, ಅದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿಯೊಬ್ಬಳಿದ್ದಾಳೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.