ಮಂಗಳೂರು: ಚಾಲಕನ ನಿಯಂತತ್ರಣ ತಪ್ಪಿದ ಲಾರಿಯೊಂದು ಕಂದಕಕ್ಕೆ ಉರುಳಿ ಇಬ್ಬರು ಗಾಯಗೊಂಡಿರುವ ಘಟನೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಮೀಪ ನಡೆದಿದೆ.
ಪೆರ್ಮನ್ನೂರು ನಿವಾಸಸಿಗಳಾದ ಲಾರಿ ಚಾಲಕ ಸದ್ದಾಂ ಹುಸೈನ್ ಮತ್ತು ಕ್ಲೀನರ್ ನೂರ್ ಅಹಮ್ಮದ್ ಗಾಯಗೊಂಡವರು. ತೊಕ್ಕೊಟ್ಟುವಿನಿಂದ ಇನೋಳಿ ಕಡೆಗೆ ಕಲ್ಲು ತರಲೆಂದು ತೆರಳುತ್ತಿದ್ದ ವೇಳೆ ದೇರಳಕಟ್ಟೆ ಸಮೀಪ ಸಿಯಾಳ ವ್ಯಾಪಾರದ ತಳ್ಳುಗಾಡಿಗೆ ಢಿಕ್ಕಿ ಹೊಡೆದು ಬಳಿಕ ಕಂದಕಕ್ಕೆ ಉರುಳಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.