ಮೂಡುಬಿದರೆ: ಕಡಂದಲೆ ಗ್ರಾಮದ ಜೋಡುಕಟ್ಟೆಯಿಂದ ಮುಕ್ಕಡಪ್ಪುವರೆಗಿನ 5ಕೀ.ಮೀ.ರಸ್ತೆ ದುರವಸ್ಥೆಯನ್ನು ವಿರೋಧಿಸಿ ಗ್ರಾಮಸ್ಥರು ಈ ಬಾರಿಗೆ ಜಿ.ಪಂ ಹಾಗೂ ತಾ.ಪಂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ಜೋಡುಕಟ್ಟೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೋರಾಟದ ನೇತೃತ್ವ ವಹಿಸಿರುವ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಪ್ರತಿಭಟನೆ ಗುರುವಾರ ಸಂಜೆ ನಡೆಯಿತು. ಕಾರ್ಯದರ್ಶಿ ಸುರೇಂದ್ರ ಭಟ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ಕಳೆದ 20 ವರ್ಷಗಳಿಂದ ಈ ರಸ್ತೆಗೆ ಡಾಮರೀಕರಣಗೊಳಿಸದಿರುವುದರಿಂದ ಸಂಪೂರ್ಣ ಕೆಟ್ಟು ಹೋಗಿದ್ದು ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು, ವಾಹನಗಳ ಓಡಾಟಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ವಿವಿಧ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿದ್ದರೂ ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಚುನಾವಣಾ ಬಹಿಷ್ಕಾರದ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಮುಖಂಡರ ಭರವಸೆಗಳಿಗೆ ಮಣಿಯುವುದಿಲ್ಲ. ತಹಸೀಲ್ದಾರ್ ಅಥವಾ ಪಿಡಿಓ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮಾತ್ರ ಈ ಬಗ್ಗೆ ಪುನರ್ ಪರಿಶೀಲಿಸಲು ತೀರ್ಮಾನಿಸಿದ್ದೇವೆ ಎಂದರು.
ಸಾವಿರ ಮತದಾರರಿಂದ ಬಹಿಷ್ಕಾರ
ಪರಿಸರದ ಒಂದು ಸಾವಿರಕ್ಕೂ ಅಧಿಕ ಮತದಾರರು ಈ ಬಾರಿಯ ಜಿ.ಪಂ.ತಾ.ಪಂ.ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಸಮಿತಿಯ ಅಧ್ಯಕ್ಷ ಜಾರ್ಜ್ ಫೆರ್ನಾಂಡಿಸ್, ಉಪಾಧ್ಯಕ್ಷ ಸುಂದರ್ ಶೆಟ್ಟಿ,ಜೊತೆಕಾರ್ಯದರ್ಶಿಗಳಾದ ಸೆಲಿನಾ ಅಬ್ರೋವ್, ವಿನಯಕುಮಾರ್ ಹಾಗೂ ನೂರಕ್ಕೂ ಅಧಿಕ ಮಂದಿ ನಾಗರಿಕರು ಪಾಲ್ಗೊಂಡಿದ್ದರು.