ಮಂಗಳೂರು: ರಾಮಾಯಣ ಪರೀಕ್ಷೆಯಲ್ಲಿ ಪುತ್ತೂರಿನ ಮುಸ್ಲಿಂ ವಿದ್ಯಾರ್ಥಿ ಶೇ.93ರಷ್ಟು ಅಂಕ ಪಡೆದು ಮೊದಲ ಸ್ಥಾನ ಗಳಿಸಿದ್ದಾಳೆ.
ಇಡೀ ರಾಜ್ಯಕ್ಕೆ ಪ್ರಥಮಳಾಗಿ ಅಂಕ ತೆಗೆಯಬೇಕು ಎಂದು ತುಂಬಾ ಕಷ್ಟ ಪಡುತ್ತಿದ್ದಳು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಫಾತಿಮಾತ್ ತಂದೆ ಇಬ್ರಾಹಿಂ ಹೇಳಿದ್ದಾರೆ. ಆಕೆ ರಾಮಾಯಣ ಮಹಾಭಾರತ ಪರೀಕ್ಷೆಗೆ ಆಕೆಯ ಚಿಕ್ಕಪ್ಪ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. 2015 ರ ನವೆಂಬರ್ ನಲ್ಲಿ ಪುತ್ತೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸಿದ ಪರೀಕ್ಷೆ ನಡೆಸಿತ್ತು. ಕೇರಳ -ಕರ್ನಾಟಕ ಗಡಿಭಾಗದಲ್ಲಿರುವ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮಾತ್ ರಾಹಿಲಾ ಅತಿ ಹೆಚ್ಚು ಅಂಕ ಪಡೆದು ಮೊದಲಿಗಳಾಗಿದ್ದಾಳೆ.