News Kannada
Wednesday, July 06 2022

ಕರಾವಳಿ

ಜನವಸತಿ ಪ್ರದೇಶದಲ್ಲಿ ಕಸ ಎಸೆಯುವ ವಿಘ್ನು ಸಂತೋಷಿಗಳ ಮೇಳೆ ಕಣ್ಗಾವಲು! - 1 min read

Photo Credit :

ಜನವಸತಿ ಪ್ರದೇಶದಲ್ಲಿ ಕಸ ಎಸೆಯುವ ವಿಘ್ನು ಸಂತೋಷಿಗಳ ಮೇಳೆ ಕಣ್ಗಾವಲು!

ಕಾರ್ಕಳ: ಜನವಸತಿ ಪ್ರದೇಶದಲ್ಲಿ ಉದ್ದೇಶ ಪೂರಕವಾಗಿ ತ್ಯಾಜ್ಯ ಎಸೆಯುತ್ತದ್ದ ವಿಘ್ನು ಸಂತೋಷಿಗಳ ವಿರುದ್ಧ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ಕಾರ್ಯಚರಣೆಯೊಂದನ್ನು ನಡೆಸಿ ಎಚ್ಚರಿಕೆ ನೀಡಿರುವ ಘಟನಾವಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.


ಕಾರ್ಕಳ ಪುರಸಭೆಯು ಘೋಷಿಸಲಾಗಿದ್ದ ಕಸ ಮುಕ್ತ ಸದಾನಂದ ಕಾಮತ್ ಮೂರನೇ ಅಡ್ಡ ರಸ್ತೆಯು ಈ ವಿವಾದದ ಕೇಂದ್ರ ಬಿಂದುವಾಗಿದೆ. ವೈಯಕ್ತಿಕ ದ್ವೇಷ ಸಾಧನೆಯ ಭಾಗವಾಗಿ ಕುಡಿದು ತಿಂದು ಉಪಯೋಗಿಸಿದ ಎಸೆಯುತ್ತಿರುವ ಬಾಟಲ್, ತ್ಯಾಜ್ಯಗಳಿಂದ ಪರಿಸರದಲ್ಲಿ ಗಬ್ಬುನಾತಕ್ಕೆ ಕಾರಣವಾಗುತ್ತಿತ್ತಲ್ಲದೇ ನಡೆದಾಡುವುದಕ್ಕೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿತ್ತು.  ಎಸೆಯಲಾಗುವ ತ್ಯಾಜ್ಯದ ಪ್ಲಾಸ್ಟಿಕ್ ತೊಟ್ಟೆಗಳನ್ನು ಕಾಗೆಗಳು ಕಚ್ಚಿ ಕೊಂಡು ಹೋಗುವ ಭರದಲ್ಲಿ ಪರಿಸರದಲ್ಲಿ ತೆರದ ಬಾವಿಯೊಳಗೂ  ಬೀಳುತ್ತಿತ್ತು. ಇದರಿಂದ ಕುಡಿಯುವ ನೀರು ಕಶ್ಮಲಗೊಳ್ಳುತ್ತಿದ್ದ ಬೆಳವಣಿಗೆ ನಿರಂತರವಾಗಿ ನಡೆಯುತ್ತಿತ್ತು.

ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಹಾಗೂ ಸಿಬ್ಬಂದಿಗಳು ಮಂಗಳವಾರ ಬೆಳಿಗ್ಗೆ ಸುಮಾರು 10ರ ವೇಳೆಗೆ ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸಿದರರಲ್ಲದೇ ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವೈಯಕ್ತಿಕ ದ್ವೇಷ ಸಾಧನೆಯೂ ಪರಿಸರದ ಮೇಲೆ ತೋರಿಸಬಾರದಾಗಿ ಜಾಗೃತಿ ಮೂಡಿಸಿದ ಅವರು ತಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು.

ತ್ಯಾಜ್ಯ ವಿಲೇವಾರಿ ವಾಹನ ಹಾಗೂ ಸ್ವಚ್ಚತಾ ವಿಭಾದ ಸಿಬ್ಬಂದಿಗಳನ್ನು ಘಟನಾ ಸ್ಥಳಕ್ಕೆ ಕರೆಯಿಸಿ ಅಲ್ಲಿ ಬಿದ್ದು ಕೊಂಡಿದ್ದ ತ್ಯಾಜ್ಯ ಸಂಗ್ರಹಸಿದ ಸ್ವಚ್ಚತೆಯ ಮಹತ್ವವನ್ನು ತಿಳಿಯ ಪಡಿಸಿದರು.

ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರಕರಣ
ವೃತ್ತಿಯಲ್ಲಿ  ಶುಶ್ರೂಕಿಯಾಗಿರುವ ಯಶೋಧಾ ಎಂಬವರು ಇದೇ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನೂತನ ಮನೆಯೊಂದನ್ನು ನಿಮರ್ಿಸಿ ವಾಸವಾಗಿದ್ದಾರೆ.  ಇವರ ಮನೆಗೆ ತೆರಳುವ ಸಾರ್ವಜನಿಕ ದಾರಿಯಲ್ಲಿ ವಿಘ್ನು ಸಂತೋಷಿಗಳು ತ್ಯಾಜ್ಯವನ್ನು ಎಸೆಯುತ್ತಿದ್ದ ಘಟನಾವಳಿಯಿಂದ ಜೀವನ ಸಾಗಿಸುವುದಕ್ಕೂ ಕಿರಿಕಿರಿ ಎನ್ನಿಸಿರುವುದು ಈ ಎಲ್ಲಾ ವಿವಾದ ಬೆಳಕಿಗೆ ಬರಲು ಕಾರಣವಾಗಿದೆ.
 
ಸ್ಥಳೀಯ ಪುರಸಭಾ ಅಧಿಕಾರಿಗಳಿಗೆ ಇದರ ಬಗ್ಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಸಮಸ್ಯೆ ಯಥಾಸ್ಥಿತಿಯಾಗಿ ಮುಂದುವರಿದಾಗ ಕಾರ್ಕಳ ನಗರ ಠಾಣೆಯ ಮೆಟ್ಟಲೇರಿದ್ದರು. ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳೀಯ ಹಲವರನ್ನು ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಯಿಸಿ ಕಳುಹಿಸಿದರೂ ವಿವಾದ ಅದೇ ರೀತಿಯಲ್ಲಿ ಮುಂದುವರಿದಿತ್ತು.

ಬಿಯರ್ ಬಾಟಲ್, ಬ್ಲೇಡ್, ಮಿಕ್ಕುಳಿದ ಆಹಾರ ಪೊಟ್ಟಣಗಳು, ಮೊಟ್ಟೆ ಸಿಪ್ಪೆ ಹಾಗೂ ಮಕ್ಕಳ ಪ್ಯಾಡ್ಗಳು ಅಗಾಧ ಪ್ರಮಾಣದಲ್ಲಿ ಸ್ಥಳದಲ್ಲಿ ಕಂಡು ಬಂತು. ಈ ಎಲ್ಲಾ ಅಂಶಗಳನ್ನು ಗಮನಿಸಿದ ಅವರು ಪರಿಸರದ ಮಕ್ಕಳಿರುವ ಮನೆಗಳಿಗೂ ಭೇಟಿ ನೀಡಿ ಸಿಕ್ಕಸಿಕ್ಕಲ್ಲಿ ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸಿದರು. ಅಲ್ಲಿರುವ ಮನೆ ಮಂದಿಯರು ನಾವ್ಯಾರು ಮಕ್ಕಳ ಪ್ಯಾಡ್ ಬಿಸಾಡಿಲ್ಲ ಎಂಬ ಉತ್ತರ ನೀಡುತ್ತಿರುವುದರಿಂದ ಸಮಸ್ಸೆಗೆ ಪರಿಹಾರ ಸಿಗದೇ ಪೇಚಿಗೆ ಸಿಲುಕಿದ ಪುರಸಭಾ ಮುಖ್ಯಾಧಿಕಾರಿ ಸ್ಥಳೀಯರಲ್ಲಿ ಹಲವು ಪ್ರಶ್ನೆಗಳ ಸುರಿಮಳೆಗೈದರು.

See also  ಕುಕ್ಕೆ: ಮಳೆಯ ಆರ್ಭಟಕ್ಕೆ ಕುಮಾರಧಾರ ಸ್ನಾನಘಟ್ಟ ಜಲಾವೃತ

ಅದೇ ಪರಿಸರದಲ್ಲಿ ಮಕ್ಕಳ ಆಟಿಕಾ-ಕಲಿಕಾ ಕೇಂದ್ರವೊಂದಿದ್ದು ಅಲ್ಲಿಗೆ ಬರುವಂತಹ ಪುಟಾಣಿಗಳು ಮಲ ಮೂತ್ರ ವಿಸರ್ಜಿಸುವುದರಿಂದ ನಿರುಪಯುಕ್ತವಾದ ಪ್ಯಾಡ್ ಗಳನ್ನು ಮಾತ್ರ ಸಂಸ್ಥೆಯ ಸಿಬ್ಬಂದಿಗಳು ಬೇಕಾಬಿಟ್ಟಿಯಾಗಿ ಎಸೆಯುತ್ತಿದ್ದ ಅಂಶ ಈ ವೇಳೆಗೆ ಬೆಳಕಿಗೆ ಬಂತು. ಸಂಸ್ಥೆಯ ಪ್ರಮುಖರು ತಮ್ಮ ತಪ್ಪನ್ನು ಒಪ್ಪಿಕೊಂಡು ಘಟನಾವಳಿ ನಡೆದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು