News Kannada
Tuesday, July 05 2022

ಕರಾವಳಿ

ಕಾಸರಗೋಡು: ಮನೆಗೆ ನುಗ್ಗಿ ನಗ ನಗದು ಕಳವು - 1 min read

Photo Credit :

ಕಾಸರಗೋಡು: ಮನೆಗೆ ನುಗ್ಗಿ ನಗ ನಗದು ಕಳವು

ಕಾಸರಗೋಡು: ಸಹೋದರರಿಬ್ಬರ ಮನೆಗೆ ನುಗ್ಗಿದ ಕಳ್ಳರು 42 ಪವನ್ ಚಿನ್ನಾಭರಣ ಮತ್ತು ನಗದು ಕಳವುಗೈದ ಘಟನೆ ಆದೂರು ಠಾಣಾ ವ್ಯಾಪ್ತಿಯ ದೇಲ೦ಪಾಡಿಯಲ್ಲಿ ನಡೆದಿದೆ.


ಪರಪ್ಪದ ಅಬ್ದುಲ್ ರಹಮಾನ್ ಮತ್ತು ಸಹೋದರ ಸಲಾವುದ್ದೀನ್ ರವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಬ್ದುಲ್ ರಹಮಾನ್ ರವರ ಮನೆಯಿಂದ 41 ಪವನ್ ಮತ್ತು ಸಲಾವುದ್ದೀನ್ ರ ಮನೆಯಿಂದ ಒಂದು ಪವನ್ ಚಿನ್ನಾಭರಣ ಮತ್ತು 2500 ರೂ. ಕಳವು ಮಾಡಲಾಗಿದೆ.

ಅಬ್ದುಲ್ ರಹಮಾನ್  ಗಲ್ಫ್ ನಲ್ಲಿದ್ದು , ಸಲಾವುದ್ದೀನ್ ಗಲ್ಫ್ ನಿಂದ ಒಂದು ವಾರದ ಹಿಂದೆ ಊರಿಗೆ ಬಂದಿದ್ದರು. ಆಲಪ್ಪುಯದಲ್ಲಿ ನಡೆದ ಸಮಸ್ತ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಇದರಿಂದ ಸಲಾವುದ್ದೀನ್ ರ ಪತ್ನಿ ಮತ್ತು ಅಬ್ದುಲ್ ರಹಮಾನ್ ರ ಪತ್ನಿ ಹಾಗೂ ಮಕ್ಕಳು ಮನೆಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದರು.  ಮರಳಿ ಬಂದಾಗ  ಕೃತ್ಯ ಬೆಳಕಿಗೆ ಬಂದಿದೆ. ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿದ್ದು, ಆದೂರು ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ತನಿಖೆ ನಡೆಸುತ್ತಿದ್ದಾರೆ.

See also  ವೃದ್ಧೆ ಸಾವಿನ ಸಂಶಯ ನೀಗಿಸಲು ಹೂತು ಹಾಕಿದ್ದ ಮೃತದೇಹ ಮೇಲಕ್ಕೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು