ಕಾಸರಗೋಡು: ಯುವಜನರ ಬಗ್ಗೆ ರಾಜ್ಯ ಸರಕಾರದ ನೀತಿಯನ್ನು ಪ್ರತಿಭಟಿಸಿ ಡಿವೈಎಫ್ ಐ ಗುರುವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿತು. ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಹೋರಾಟ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮೆರವಣಿಗೆಯನ್ನು ಜಿಲ್ಲಾಧಿಕಾರಿ ಕಚೇರಿ ದ್ವಾರದ ಬಳಿ ಪೊಲೀಸರು ತಡೆದರು. ಬಳಿಕ ನಡೆದ ಧರಣಿಯನ್ನು ಡಿ ವೈ ಎಫ್ ಐ ರಾಜ್ಯ ಜೊತೆ ಕಾರ್ಯದರ್ಶಿ ಎ.ಎಂ ಶಂಶೀರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಶಿವಾಜಿ ವೆಳ್ಳಿಕೋತ್, ಸಿ,ಜೆ ಸಜಿತ್, ಎಂ.ಆರ್ ರಾಜೀವ್, ಸಿ.ಎ ಜುಬೈರ್, ಕೆ. ಶಬೀಶ್, ಕೆ. ಶಿವಪ್ರಸಾದ್ ಮೊದಲಾದವರು ಮಾತನಾಡಿದರು. ಉದ್ಯೋಗ ನೇಮಕಾತಿ ಕಡಿತಗೊಳಿಸುವ ಹುನ್ನಾರ, ಸ್ಮಾರ್ಟ್ ಸಿಟಿಯಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಸೇರಿದಂತೆ ಹಲವಾರು ಬೇಡಿಕೆ ಗಳನ್ನು ಮುಂದಿಟ್ಟು ಕೊಂಡು ಪ್ರತಿಭಟನೆ ನಡೆಸಲಾಯಿತು.