ಬಂಟ್ವಾಳ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಹಿಳೆ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ತಾಲೂಕಿನ ವಾಮದಪದವು ಸಮೀಪದ ಕೊಡಂಬೆಟ್ಟು ನಿವಾಸಿ ಸುನೀಲ್ ಗಟ್ಟಿ ಎಂಬವರ ಪತ್ನಿ ಗೀತಾ (32) ಮೃತಪಟ್ಟ ದುರ್ದೈವಿ. ಗರ್ಭೀಣಿ ಗೀತಾ ಅವರಿಗೆ ಹೆರಿಗೆ ನೋವು ಕಾಣಿಸಿದ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆರಿಗೆಯ ವೇಳೆ ತೀವ್ರ ರಕ್ರಸಾವ್ರಗೊಂಡು ಅವರು ಮೃತಪಟ್ಟಿದ್ದರು. ಈ ಬಗ್ಗೆ ವೈದ್ಯರು ಮನೆಮಂದಿಗೆ ಯಾವುದೇ ಮಾಹಿತಿ ನೀಡದೆ ತುರ್ತು ಚಿಕಿತ್ಸೆಗೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸುಂತೆ ಸೂಚಿಸಿದ್ದು ಅಂಬ್ಯಲೆನ್ಸ್ ಮೂಲಕ ಅಲ್ಲಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ದಾಖಲಿಸಿಕೊಳ್ಳುವ ಮೊದಲೇ ಪರಿಶೀಲನೆ ನಡೆದ ವೈದ್ಯರು ಗರ್ಭೀಣಿ ಮೃತಪಟ್ಟಿರುವುದಾಗಿ ತಿಳಿಸಿದ್ದರು. ವೈದ್ಯರ ನಿರ್ಲಕ್ಷದಿಂದಲೇ ಆರೋಗ್ಯವಂತಳಾಗಿದ್ದ ಗರ್ಭೀಣಿ ಮೃತಪಟ್ಟಿದ್ದಾಳೆಂದು ಮನೆಮಂದಿ ಆರೋಪಿಸಿದ್ದಾರೆ. ಗೀತಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೂರನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.