News Kannada

ಕರಾವಳಿ

ಕುಡಿಯುವ ನೀರಿನ ಸಮಸ್ಯೆ: ಪುರಸಭಾ ಕಚೇರಿಗೆ ಮುತ್ತಿಗೆ - 1 min read

ಕುಡಿಯುವ ನೀರಿನ ಸಮಸ್ಯೆ: ಪುರಸಭಾ ಕಚೇರಿಗೆ ಮುತ್ತಿಗೆ

ಬಂಟ್ವಾಳ: ಪುರಸಭೆ ನೀಡಿದ ಭರವಸೆಯಂತೆ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ವಾಡ್ರ್ ನಂ.4 ಮಂಡಾಡಿ ಪರಿಸರದ ನಾಗರಿಕರು ಗುರುವಾರ 2ನೇ ಬಾರಿಗೆ ಮತ್ತೊಮ್ಮೆ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.


15 ದಿನಗಳ ಹಿಂದೆಯಷ್ಟೇ ಈ ಭಾಗದ ನಾಗರಿಕರು ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಪ್ರತಿಭಟನೆ ನಡೆಸಿದಾಗ ಒಂದು ವಾರದೊಳಗೆ ಪರಿಹರಿಸುವ ಭರವಸೆ ನೀಡಲಾಯಿತು. ಆದರೆ 2 ದಿನಗಳ ಕಾಲ ನೀರು ಪೂರೈಕೆಯಾಗಿದ್ದರೂ ನಂತರದ ದಿನಗಳಲ್ಲಿ ನೀರು ಪೂರೈಕೆ ಅಸಮರ್ಪಕವಾಗಿದೆ ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ಸುಧಾಕರ, ಅಧ್ಯಕ್ಷೆ ವಸಂತಿಚಂದಪ್ಪ ರವರು ಪ್ರತಿಭಟನಾ ಕಾರರನ್ನು ಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನಾಕಾರು ಬಗ್ಗಲಿಲ್ಲ. ಈ ಸಂದರ್ಭದಲ್ಲಿ ಸದಸ್ಯ ಪ್ರವೀಣರವರು ಮಧ್ಯಪ್ರವೇಶಿಸಿ ಈಗ ಸಾಮಾನ್ಯ ಸಭೆಇದೆ ಅದರಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು ಎಂದಾಗ ಕೆರಳಿದ ಪ್ರತಿಭಟನಾಕಾರರು ಸದಸ್ಯ ಪ್ರವೀಣರವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮೊದಲು ನಮಗೆ ನೀರು ಕೊಡಿ ಆಮೇಲೆ ಸಭೆ ನಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳೀಯ ಸದಸ್ಯ ದೇವದಾಸ ಶೆಟ್ಟಿ ಹಾಗೂ ಪ್ರವೀಣರವರ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು.

ಸದಸ್ಯರಾದ ಗಂಗಾಧರ, ಜಗದೀಶ್ ಕುಂದರ್, ರಾಮಕೃಷ್ಣ ಆಳ್ವರವರು ಮಧ್ಯಪ್ರವೇಶಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಹಂತದಲ್ಲಿ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋವರನ್ನು ಕೂಡ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಮುಂದಿನ 2 ದಿನದೊಳಗಾಗಿ ಈ ಭಾಗದ ನೀರಿನ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಮುಖಖ್ಯಾಧಿಕಾರಿ, ಅಧ್ಯಕ್ಷೆ ಹಾಗೂ ಇಂಜಿನಿಯರ್ ಭರವಸೆ ಇತ್ತರು.

ಈ ಭರವಸೆ ಈಡೇರದಿದ್ದಲ್ಲಿ ಪಂಪ್ ಹೌಸ್ಗೆ ಬೀಗ ಜಡಿಯುವುದಾಗಿ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಸಿದರು. ಪ್ರತಿಭಟನೆಯ ವೇಳೆ ಸಾಮಾನ್ಯ ಸಭೆಗೆ ಹಾಜರಾಗಲು ಬಂದ ಸದಸ್ಯರು ಪ್ರತಿಭಟನೆಯ ಬಿಸಿ ಎದುರಿಸಬೇಕಾಗಿ ಬಂತು. ಪ್ರತಿಭಟನೆ ಮುಗಿಯುವವರೆಗೂ ಕಚೇರಿಯ ಹೊರಗಡೆಯೇ ನಿಲ್ಲುವಂತಾಯಿತು. ಸದಸ್ಯರಾದ ದೇವದಾಸ ಶೆಟ್ಟ ಹಾಗೂ ಗೋವಿಂದ ಪ್ರಭುರವರು ಪ್ರತಿಭಟನಾಕಾರರಿಗೆ ಸಾತ್ ನೀಡಿದರು. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಪ್ರತಿಭಟನೆಯ ಕೊನೆಗಳಿಗೆಯಲ್ಲಿ ಆಗಮಿಸಿದರು.

See also  ಹೊಳೆಗೆ ಕೊಳಚೆ ನೀರು: ಅಧ್ಯಯನಕ್ಕೆ ಜಿಲ್ಲಾಧಿಕಾರಿ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು