News Kannada
Tuesday, July 05 2022

ಕರಾವಳಿ

ಗಾಂಜಾ ಸಾಗಾಟ: ಓರ್ವನ ಬಂಧನ - 1 min read

Photo Credit :

ಗಾಂಜಾ ಸಾಗಾಟ: ಓರ್ವನ ಬಂಧನ

ಕಾಸರಗೋಡು : ಸುಮಾರು 80 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಓರ್ವ ಆರೋಪಿಯನ್ನು ಕಾಸರಗೋಡು ಡಿವೈಎಸ್ ಪಿ ಎಂ.ವಿ  ಸುಕುಮಾರನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

80 kg Ganja found in Duster car: Main accused nabbed-1
ಬಂಧಿತನನ್ನು  ಮಂಜೇಶ್ವರ ಮೀಯಪದವಿನ ವಿಲ್ಲಿ  ಡಿಸೋಜ ( 26) ಎಂದು ಗುರುತಿಸಲಾಗಿದೆ.  ಈತ ಕಾರು ಚಾಲಕನಾಗಿದ್ದು , ಪೊಲೀಸರ ಕಣ್ತಪ್ಪಿಸಿ ಇತರ ಇಬ್ಬರ ಜೊತೆ ಪರಾರಿಯಾಗಿದ್ದನು. ಈತ ಈ ಹಿಂದೆ ಸ್ಪಿರಿಟ್ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಶಿಕ್ಷೆ  ಅನುಭವಿಸಿ ಬಳಿಕ ಬಿಡುಗಡೆಗೊಂಡಿದ್ದನು. ಈತನ ಜೊತೆ ಇದ್ದ ಇನ್ನೋರ್ವ ಆರೋಪಿ ಪೈವಳಿಕೆ ಬಾಯಿಕಟ್ಟೆಯ ಗುಜರಿ ಹಮೀದ್ ನನ್ನು ವಾರದ ಹಿಂದೆ ಪೊಲೀಸರು  ಬಂಧಿಸಿದ್ದರು. ಚಿನ್ನಾಭರಣ ಸಾಗಾಟ ಏಜೆಂಟ್ ತ್ರಿಶ್ಯೂರಿನ ಟೋನಿ ಎಂಬವರಿಂದ 1.3 ಕಿಲೋ  ಚಿನ್ನಾಭರಣ ಮತ್ತು  4, 36 ಲಕ್ಷ ರೂ.  ದರೋಡೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದಾಗ ಗಾಂಜಾ ಸಾಗಾಟದ ಬಗ್ಗೆ ಮಾಹಿತಿ ಲಭಿಸಿತ್ತು.

ಈತನಿಂದ ಲಭಿಸಿದ ಮಾಹಿತಿಯಂತೆ ವಿಲ್ಲಿ ಡಿಸೋಜ ನನ್ನು ಬಂಧಿಸಲಾಗಿದೆ. ಈತ ಗಾಂಜಾ ಸಾಗಾಟ ವಾಹನಗಳಿಗೆ ಬೆಂಗಾವಲಾಗಿ ತೆರಳುವುದು, ಗಾಂಜಾ ಸಾಗಾಟ ವಾಹನಗಳ ಚಾಲಕನಾಗಿ ತೆರಳುತ್ತಿದ್ದನು. ಒಡಿಸ್ಸಾದಿಂದ ಗಾಂಜಾವನ್ನು  ಕಾಸರಗೋಡಿಗೆ ಸಾಗಿಸುತ್ತಿದ್ದುದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ. ಫೆಬ್ರವರಿ 15 ರಂದು  ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಗಾಂಜಾವನ್ನು ಕಾಸರಗೋಡು ಡಿವೈಎಸ್ ಪಿಎಂ .ವಿ ಸುಕುಮಾರನ್ ನೇತ್ರತ್ವದ ಪೊಲೀಸ್ ತಂಡ ಮಂಜೇಶ್ವರ ದಿಂದ ವಶಪಡಿಸಿಕೊಂಡಿದ್ದು ,ಡಸ್ಟರ್ ಕಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

See also  ಕುಮಟಾದಲ್ಲಿ ಮಗು ಅಪಹರಣಕಾರನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು