News Kannada
Friday, September 30 2022

ಕರಾವಳಿ

ಒಮ್ನಿ ವ್ಯಾನ್ ಗೆ ಕೆಎಸ್ ಆರ್ ಟಿಸಿ ಬಸ್ಸು ಡಿಕ್ಕಿ: ಓರ್ವ ಸಾವು - 1 min read

Photo Credit :

ಒಮ್ನಿ ವ್ಯಾನ್ ಗೆ ಕೆಎಸ್ ಆರ್ ಟಿಸಿ ಬಸ್ಸು ಡಿಕ್ಕಿ: ಓರ್ವ ಸಾವು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಹೊಸಂಗಡಿ ಬಳಿ ಒಮ್ನಿ ವ್ಯಾನ್ ಮತ್ತು ಕರ್ನಾಟಕ ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ  ಮಂಗಳವಾರ ಸಂಜೆ ನಡೆದಿದೆ.

ಮೃತಪಟ್ಟವರನ್ನು ಉಪ್ಪಳ ಹಿದಾಯತ್ ನಗರದ ಅಬ್ದುಲ್ ಅಜೀಜ್ (55) ಎಂದು ಗುರುತಿಸಲಾಗಿದೆ. ಇವರು ಒಮ್ನಿ ಚಾಲಕರಾಗಿದ್ದರು. ಗಾಯಗೊಂಡವರು ಉಪ್ಪಳ ನಿವಾಸಿಗಳಾಗಿದ್ದು ,ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ  ಬಸ್ಸು ಮತ್ತು ತಲಪಾಡಿ ಕಡೆಯಿಂದ ಉಪ್ಪಳಕ್ಕೆ ಬರುತ್ತಿದ್ದ  ಒಮ್ನಿ ವ್ಯಾನ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ನಜ್ಜುಗುಜ್ಜಾದ  ವ್ಯಾನ್ ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ಹರ ಸಾಹಸಪಟ್ಟು ಹೊರತೆಗೆದು ಆಸ್ಪತ್ರೆಗೆ ತಲುಪಿಸಿದರು. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

See also  ಬೆಳ್ತಂಗಡಿಯ ಕೆಲವೆಡೆ ಸತತ ಮಳೆ: ಉಕ್ಕಿ ಹರಿದ ನದಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು