News Kannada
Tuesday, October 04 2022

ಕರಾವಳಿ

ಸೂಕ್ತ ಕ್ರಮದೊಂದಿಗೆ ನಾಗರಿಕರ ಸಮಸ್ಸೆಗೆ ಸ್ವಂದನೆ - 1 min read

Photo Credit :

ಸೂಕ್ತ ಕ್ರಮದೊಂದಿಗೆ ನಾಗರಿಕರ ಸಮಸ್ಸೆಗೆ ಸ್ವಂದನೆ

ಕಾರ್ಕಳ: ನಾಗರಿಕರು ವಿವಿಧ ಸಮಸ್ಸೆಗೆಗಳಿಗೆ ಸಿಲುಕಿ ಕಚೇರಿ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ತಾಲೂಕು ಕೇಂದ್ರಗಳಲ್ಲಿ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖಾಧಿಕಾರಿಗಳನ್ನು ಕರೆದು ಅರ್ಜಿದಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿನಯಕುಮಾರ್ ಸೊರಕೆ ತಿಳಿಸಿದ್ದರು.

ನಗರದ ಪ್ರವಾಸಿ ಬಂಗಲೆಯಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರದಂದು ಇಂತಹ ಕಾರ್ಯಕ್ರಮವನ್ನು ಕಾರ್ಕಳದಲ್ಲಿ ಆಯೋಜಿಸಲಾಗಿವುದು. ಇದರಿಂದ ಅರ್ಜಿದಾರರಿಗೆ ಪರಿಹಾರ ದೊಕುವಂತಾಗುತ್ತದೆ. ಬಂದಿರುವ ಅರ್ಜಿಗಳ ವಿಲೇವಾರಿಯ ಜವಾಬ್ದಾರಿಯನ್ನು ತಹಶೀಲ್ದಾರ್ ಅವರಿಗೆ ವಹಿಸಲಾಗಿದೆ. ಬೆಂಗಳೂರು ಮಟ್ಟದಲ್ಲಿ ನಡೆಯಬೇಕಾದ ಅರ್ಜಿ ವಿಲೇವಾರಿಗೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.

ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಕಾಡುತ್ತಿರುವ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಅವರೊಂದಿಗೆ ಸಮಾಲೋಚನೆ ನಡೆಸಿ 100 ಹಾಸಿಗೆ ಇರುವಂತಹ ತಾಲೂಕು ಸರಕಾರಿ ಆಸ್ಪತ್ರೆಗೆ ಅನುಗುಣವಾಗಿ ಖಾಯಂ ವೈದ್ಯರನ್ನು ನಿಯೋಜನೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಸೊರಕೆ ಇದೇ ಸಮದರ್ಭದಲ್ಲಿ ವಿವರಿಸಿದರು.

ಕೋಟ್ಯಾಂತರ ಅನುದಾನ ವಿನಿಯೋಗಿಸಿ ಬಂಡೀಮಠ ಬಸ್ ನಿಲ್ದಾಣವನ್ನ ಕಾಂಕ್ರೀಟ್ಕರಣಗೊಳಿಸಲಾಗಿದೆ. ಹೈಕೋರ್ಟ್ ನೀಡಿರುವ ಅದೇಶ ಪರಿಪಾಲನೆಯಾಗದೇ ಬಂಡೀಮಠ ಬಸ್ನಿಲ್ದಾಣ ಪಾಳು ಬೀಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೊರಕೆ ನ್ಯಾಯಾಂಗಕ್ಕೆ ಜಿಲ್ಲಾಡಳಿತ ಗೌರವಿಸುತ್ತದೆ. ಹೀಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಹಂತ ಹಂತವಾಗಿ ಅದೇಶ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಕಟ್ಟಿಬದ್ಧವಾಗಿದೆ ಎನ್ನುವ ಮೂಲಕ ಹಾರಿಕೆ ಉತ್ತರ ನೀಡಿದರು.

ಒಟ್ಟು 33 ಅರ್ಜಿಗಳು ಬಂದಿದ್ದು ಅದರಲ್ಲಿ 11 ಅರ್ಜಿಗಳು ಕಂದಾಯ ಇಲಾಖೆಗಳಿಗೆ ಸಂಬಂಧಿಸಿದಾಗಿತ್ತು. ಉಳಿದೆಲ್ಲವೂ ವಿವಿಧ ಇಲಾಖೆಗೆ ಸೇರಿದಾಗಿತ್ತು. ಅದನ್ನು ತಹಶೀಲ್ದಾರರು ಆಯಾ ಇಲಾಖಾಧಿಕಾರಿಗಳಿಗೆ ಹಸ್ತಾಂತರಿಸಿದರು.  ತಹಶೀಲ್ದಾರ್ ರಾಘವೇಂದ್ರ ಸ್ವಾಗತಿಸಿದರು. ಮಾಜಿಶಾಸಕ ಹೆಚ್.ಗೋಪಾಲ ಭಂಡಾರಿ, ಎಎಸ್ಪಿ ಡಾ. ಸುಮನಾ ಮೊದಲಾದವರು ಉಪಸ್ಥಿತರಿದ್ದರು.
 

See also  ಬಂಡೀಪುರ ಕಾಡ್ಗಿಚ್ಚಿಗೆ ಸಿಬ್ಬಂದಿ ಬಲಿ: ಅರಣ್ಯ ನಾಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು