News Kannada
Monday, October 03 2022

ಕರಾವಳಿ

ಸೌದಿ ಅರೇಬಿಯಾದಲ್ಲಿ ಅಪಘಾತ: ಬಂಟ್ವಾಳದ ಮಹಿಳೆ ಸಾವು - 1 min read

Photo Credit :

ಸೌದಿ ಅರೇಬಿಯಾದಲ್ಲಿ ಅಪಘಾತ: ಬಂಟ್ವಾಳದ ಮಹಿಳೆ ಸಾವು

ಬಂಟ್ವಾಳ: ಸೌದಿ ಅರೇಬಿಯಾದಲ್ಲಿ ಭಾನುವಾರ ಮುಂಜಾನೆ ನಡೆದ ಅಪಘಾತವೊಂದರಲ್ಲಿ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಕುಕ್ಕಾಜೆ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪತ್ನಿ ಉಮೈಮಾ(37) ಎಂದು ಗುರುತಿಸಲಾಗಿದೆ. ಅವರ ಪತಿ ಅಬ್ದುಲ್ ರಝಾಕ್(40), ಪುತ್ರಿ ಅರಿಫಾ(18) ಹಾಗೂ ಪುತ್ರ ಮುಹಾದ್ (9) ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Woman from Bantwal dies in mishap in Saudi Arabia-1ಮೂಲತಃ ಮಂಚಿ ಕುಕ್ಕಾಜೆ ನಿವಾಸಿಗಳಾದ ಅಬ್ದುಲ್ ರಝಾಕ್ ಮತ್ತವರ ಪತ್ನಿ ಉಮೈಮಾ ರವರು ಸೌದಿ ಅರೇಬಿಯಾದಲ್ಲಿ ವಾಸ್ತವ್ಯವಿದ್ದರು. ಮಕ್ಕಳು  ಮಂಚಿ ಕುಕ್ಕಾಜೆಯ ಮನೆಯಲ್ಲಿ ಸಂಬಂಧಿಕರೊಂದಿಗಿದ್ದು ಶಾಲೆಗೆ ತೆರಳುತ್ತಿದ್ದರು.  ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಸೌದಿ ಅರೇಬಿಯಾಕ್ಕೆ  ತೆರಳಿದ್ದು, ಮರಳಿ ಬರಲು ಸಿದ್ದತೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.  ರಝಾಕ್ ರವರು ಮಕ್ಕಳನ್ನು ಊರಿಗೆ ಕಳುಹಿಸಲೆಂದು ಕೆಲಸ ಸಾಮಾಗ್ರಿ ಖರೀದಿಗೆಂದು ತೆರಳಿದವರು ಕಾರಿನಲ್ಲಿ ವಾಪಾಸಾಗುತ್ತಿದ್ದ ವೇಳೆ ದಮಾಮ್ ಗರಿಯಾ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ  ರಝಾಕ್ ಅವರ ಪತ್ನಿ ಉಮೈಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಪತಿ ರಝಾಕ್, ಮಗಳು ಅರಿಫಾ ಹಾಗೂ ಮುಹಾದ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಾರಿನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿತೇ, ಅಥವಾ  ಬೇರೆ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆಯಿತೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ರಝಾಕ್ ಅವರ ಮಕ್ಕಳಾದ ಆರಿಫಾ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಮಗ ಮುಹಾದ್ ಕುಕ್ಕಾಜೆಯ ಖಾಸಗಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು, ಸ್ಪಷ್ಟ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

 

See also  ಶಿಕ್ಷಕಿ ಬೈದರೆಂಬ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು