News Kannada
Sunday, September 25 2022

ಕರಾವಳಿ

ಕಾಡು ಬಿಟ್ಟು ನಿರಾಶ್ರಿತರ ಕೇಂದ್ರಕ್ಕೆ ಹೋಗಲು ಒಪ್ಪದ ಕೆಂಚಪ್ಪ - 1 min read

Photo Credit :

ಕಾಡು ಬಿಟ್ಟು ನಿರಾಶ್ರಿತರ ಕೇಂದ್ರಕ್ಕೆ ಹೋಗಲು ಒಪ್ಪದ ಕೆಂಚಪ್ಪ

ಸುಳ್ಯ: ನಾಡನ್ನು ತೊರೆದು ಕಾಡಿನಲ್ಲಿ ತನ್ನದೇ ಲೋಕವನ್ನು ಸೃಷ್ಠಿಸಿ ಕಾನನವಾಸಿಯಾಗಿರುವ ಕೆಂಚಪ್ಪ ಕಾಡನ್ನು ಬಿಟ್ಟು ನಾಡಿಗೆ ತೆರಳಲು ಒಪ್ಪದ ಕಾರಣ ಇವರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲು ನಡೆಸಿದ ಪ್ರಯತ್ನ ವಿಫಲಗೊಂಡಿದೆ.

Forest man Kenchappa Gowda refuses to go to rehab centre-1ಕಳೆದ 48 ವರ್ಷಗಳಿಂದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಮಿಯ್ಯೋಣಿ ಸಮೀಪ ಬಾಳೆಡಿ ರಕ್ಷಿತಾರಣ್ಯದಲ್ಲಿ ಪುಟ್ಟ ಗುಡಿಸಲು ನಿರ್ಮಿಸಿ ಒಂಟಿಯಾಗಿ ಜೀವನ ಸಾಗಿಸುವ ಮಿತಭಾಷಿ ಕೆಂಚಪ್ಪರನ್ನು ಮಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸಿ ಆರೈಕೆ ಮಾಡಲು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆದೇಶ ನೀಡಿದ್ದರು. ಇದರನ್ವಯ ಸುಳ್ಯ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳು ಮರ್ಕಂಜಕ್ಕೆ ತೆರಳಿ ಕೆಂಚಪ್ಪರನ್ನು ಭೇಟಿ ಮಾಡಿ ಮನವೊಲಿಸಿ ನಿರಾಶ್ರಿತ ಕೇಂದ್ರಕ್ಕೆ ಕರೆದೊಯ್ಯುವ ಪ್ರಯತ್ನ ನಡೆಸಿದರೂ ಇವರು ಕಾಡನ್ನು ಬಿಡಲು ಸಿದ್ಧರಿರಲಿಲ್ಲ. ನಾನು ಎಲ್ಲಿಗೂ ಬರುವುದಿಲ್ಲ ಇಲ್ಲಿಯೇ ಇರುವುದಾಗಿ ಅವರು ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದಾರೆ. ಬಳಿಕ ಅಧಿಕಾರಿಗಳ ತಂಡ ಕೆಂಚಪ್ಪ ಅವರ ಸಂಬಂಧಿಕರಲ್ಲಿ ಮತ್ತು ಊರಿನ ಜನರಲ್ಲಿ ಚರ್ಚೆ ನಡೆಸಿದಾಗ ಕೆಂಚಪ್ಪರನ್ನು ಒತ್ತಾಯ ಪೂರ್ವಕವಾಗಿ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯುವುದು ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ಕೆಂಚಪ್ಪರನ್ನು ಕರೆದೊಯ್ಯದೆ ವಾಪಾಸಾಗಿದ್ದಾರೆ.  ವಯೋವೃದ್ಧರಾಗಿರುವ ಕೆಂಚಪ್ಪರು ಸುಮಾರು 48 ವರ್ಷಗಳಿಂದ ಅರಣ್ಯದಲ್ಲಿ ವಾಸಿಸುತ್ತಿದ್ದು ಇವರನ್ನು ಮಂಗಳೂರಿನ ಪಚ್ಚನಾಡಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕರೆ ತಂದು ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ಅವರ ಪಾಲನೆ ಮಾಡಲು ಕ್ರಮ ಕೈಗೊಳ್ಳಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಭೇಟಿಯಾದರೂ ಕಾಡಿನ ಲೋಕವನ್ನು ತೊರೆಯಲು ಕೆಂಚಪ್ಪ ಸಿದ್ಧರಿರಲಿಲ್ಲ.

ಅರಣ್ಯವಾಸಿ ಕೆಂಚಪ್ಪ :
ತನ್ನ 23 ನೇ ವಯಸ್ಸಿನಲ್ಲಿ ಏಕಾಏಕಿ ಕಾಡಿನ ಆಕರ್ಷಣೆಗೊಳಗಾಗಿ ಕಾನನದ ಕಡೆಗೆ ತೆರಳಿದ ಕೆಂಚಪ್ಪ ಕಾಡಿನಲ್ಲಿ ನಿರ್ಮಿಸಿದ ಗುಡಿಸಲಿನಲ್ಲಿ ಬಿದಿರಿನ ತಾತ್ಕಾಲಿಕ ಮಂಚದಲ್ಲಿ ಅಡಿಕೆಯ ಹಾಳೆಯ ಹಾಸಿಗೆಯಲ್ಲಿ ಮಲಗುತ್ತಾರೆ. ಮಳೆಗಾಲದಲ್ಲಿ ವಿಪರೀತ ಮಳೆ ಬಂದರೆ ಮರದ ಪೊಟರೆಯಲ್ಲಿ ಆಶ್ರಯ ಪಡೆಯುತ್ತಾರೆ. ತನ್ನ ಗುಡಿಸಲಿನ ಸುತ್ತಲೂ ಗಿಡಗಳನ್ನು ಬೆಳೆಸುವ ಇವರು ತನ್ನ ಪರಿಸರ ಪ್ರೇಮವನ್ನೂ ಬಿಚ್ಚಿಟ್ಟಿದ್ದಾರೆ. ತನ್ನ ಹೊಟ್ಟೆ ಹೊರೆಯಲು ಸಮೀಪದ ಮನೆಗೆ ದಿನಕ್ಕೊಮ್ಮೆ ಹೋಗಿ ಅಲ್ಲಿ ನೀಡುವ, ಊಟ, ತಿಂಡಿ ತಿನಿಸು ಗಳನ್ನು ತಿಂದು ಬಂದರೆ ಉಳಿದ ಸಮಯದಲ್ಲಿ ಕಾಡಿನಲ್ಲಿ ಸಿಗುವ ಗೆಡ್ಡೆ ಗೆಣಸುಗಳೇ ಆಹಾರ. ಕಟ್ಟಿಗೆ, ಜೇನು ಮತ್ತಿತರ ವಸ್ತುಗಳನ್ನು ತಂದು ಹತ್ತಿರದ ಮನೆಯವರಿಗೆ ನೀಡಿ ಇವರು ಆಹಾರ ಸೇವಿಸಿ ಹೋಗುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ತೀರಾ ಅಧಿಕ ಮಳೆ ಬಂದಾಗ ಹಾಗೂ ಇತರ ಸಂದರ್ಭದಲ್ಲಿ  ಹತ್ತಿರದಲ್ಲಿ ಇರುವ ಮರಗಳನ್ನು ತನ್ನದೇ ರೀತಿಯಲ್ಲಿ ಪೂಜೆ ಮಾಡುತ್ತಾರೆ.

ಇವರಿಗೆ ಹೊರ ಜಗತ್ತಿನ ಪರಿಜ್ಞಾನವೇ ಇದ್ದಂತಿಲ್ಲ. ಪಡಿತರ ಚೀಟಿ ಮತ್ತಿತರ ದಾಖಲೆಗಳಾಗಲೀ ಇತರ ವ್ಯವಸ್ಥೆಗಳಾಗಲೀ ಇಲ್ಲ. ಇದುವರೆಗೂ ಮತದಾನ ಮಾಡಿಲ್ಲ. ಸರ್ಕಾರ, ಯೋಜನೆಗಳು, ಸಮಾಜ ಇತರ ಯಾವುದೇ ವಿಚಾರಗಳ ಬಗ್ಗೆ ಇವರಿಗೆ ಅರಿವೇ ಇಲ್ಲ. ಸಂಬಂಧಿಕರು ಮತ್ತು ಊರಿನವರು ಇವರನ್ನು ಊರಿಗೆ ಕರೆ ತರುವ ಪ್ರಯತ್ನ ನಡೆಸಿದರೂ ಅವರು ಮರಳಿ ಕಾಡು ಸೇರುತ್ತಾರೆ.

See also  ನೆರಿಯ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು