News Kannada
Friday, September 30 2022

ಕರಾವಳಿ

70ನೇ ಸ್ವಾತಂತ್ರ್ಯ ಸಂಭ್ರಮ: ಪ್ರಕೃತಿ ವಿದ್ಯಾ ಸಮೂಹ ಸಂಸ್ಥೆ - 1 min read

Photo Credit :

70ನೇ ಸ್ವಾತಂತ್ರ್ಯ ಸಂಭ್ರಮ: ಪ್ರಕೃತಿ ವಿದ್ಯಾ ಸಮೂಹ ಸಂಸ್ಥೆ

ಕಾರ್ಕಳ: ಪ್ರಕೃತಿ ಸಮೂಹ ಸಂಸ್ಥೆಯು 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಂಡು ಬಹಳ ವಿಜೃಂಭಣೆಯಿಂದ ನೆರವೆರಿಸಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ಸೈನಾಧಿಕಾರಿಯಾದ ಜೊನ್ ವಿಲ್ಸನ್ ಪಿಂಟೋ ಅವರು ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಪಥಸಂಚಲನ ಮೂಲಕ ಚಾಲನೆ ನಡೆಯಿತು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಯಾವಾಗಲೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ತಮ್ಮ ಗುರಿಯನ್ನು ಸಾಧಿಸಬೇಕೆಂದು ಹುರಿದುಂಬಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ಬಿ. ಪದ್ಮನಾಭ ಗೌಡರವರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರ ತಂದೆಯವರಾದ ಕ್ರಿಸ್ಪಿನ್ ಲೂಯಿಸ್ ಕ್ರಾಸ್ತಾ,  ಆಡಳಿತಾಧಿಕಾರಿ ಆಕಾಶ್ ಜವಳಿ, ಪ್ರಾಂಶುಪಾಲರಾದ ರಾಘವೇಂದ್ರ ಶೆಣೈ, ಉಪಪ್ರಾಂಶುಪಾಲರಾದ ವೀಣಾ ಎ ಹಾಗೂ ಅನೇಕ ಮಂದಿ ಗಣ್ಯತಿಗಣ್ಯರು ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಹಲವು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಂಗೀತ ಸ್ಪರ್ಧೆ ಕಾರ್ಯಕ್ರಮಕ್ಕೆ ಇನ್ನಷ್ಟು ಬೆರಗು ನೀಡಿತು. ಸವಿತಾ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕುಮಾರಿ. ಕೃಪಾ ಸ್ವಾಗತ ಕೋರಿದರು. ಸಮೀಹಾ ವಂದನಾರ್ಪಣೆ ಸಲ್ಲಿಸಿದರು.

See also  ಆಟಿ ಅಮವಾಸ್ಯೆ: ಕಾರಿಂಜೆ, ನರಹರಿ ಪರ್ವತದಲ್ಲಿ ಜನಸಾಗರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು