News Kannada
Wednesday, October 05 2022

ಕರಾವಳಿ

ಪೊಳಲಿಯಲ್ಲಿ ಬಿಸಿಯಾಗಿದ್ದ ಬಾವಿ ನೀರು ತಣ್ಣಗೆ: ಇನ್ನೂ ತಣಿದಿಲ್ಲ ಜನರ ಕುತೂಹಲ - 1 min read

Photo Credit :

ಪೊಳಲಿಯಲ್ಲಿ ಬಿಸಿಯಾಗಿದ್ದ ಬಾವಿ ನೀರು ತಣ್ಣಗೆ: ಇನ್ನೂ ತಣಿದಿಲ್ಲ ಜನರ ಕುತೂಹಲ

ಬಂಟ್ವಾಳ: ಪೊಳಲಿಯಲ್ಲಿ ಸೋಮವಾರ ಬೆಳಕಿಗೆ ಬಂದ ಬಾವಿಯ ನೀರು ಬಿಸಿಯಾಗಿದ್ದ ಬಾವಿಯ ನೀರು ಮಂಗಳವಾರ ತಣ್ಣಗಾಗಿದೆ. ಆದರೆ  ನೀರಿನ ಕುರಿತಾದ ಜನರ ಕುತೂಹಲ ಇನ್ನೂ ತಣಿದಿಲ್ಲ.

ಸೋಮವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಹಿಂಬದಿಯ ಮನೆಯ ಬಾವಿಯ ನೀರು ಬಿಸಿಯಾಗಿದ್ದು ಎಲ್ಲರನ್ನು ವಿಸ್ಮಯಗೊಳಿಸಿತ್ತು. ದೂರದೂರಗಳಿಂದ ಜನ ಸಾಗರವೇ ಹರಿದು ಬಂದಿದ್ದು,  ಜನರು ಕುತೂಹಲದಿಂದ ಬಂದು  ಬಾವಿಯ ನೀರನ್ನು ಕೊಡದಲ್ಲಿ ಸೇದಿ ಬಿಸಿ ನೀರನ್ನು ನೋಡಿ ಅಚ್ಚರಿ ಪಟ್ಟರು. ಈ ನಡುವೆ ಮಂಗಳವಾರದಂದು ಬೆಳಗ್ಗೆ ನೋಡುವಾಗ ಬಾವಿಯ ನೀರು ಕುದಿಸಿ ಆರಿಸಿದ ನೀರಿನಂತೆ ತಣ್ಣಗಾಗಿತ್ತು, ಆದರೆ ಆವಿಯಂತಾ ಹೊಗೆ  ಬಾವಿಯ ಒಳಗಿಂದ ಕಂಡುಬಂದಿದೆ.  ಆದರೆ ಸಂಜೆಯ ಹೊತ್ತಿನಲ್ಲಿ ನೀರು ತುಂಬಾ ತಣ್ಣಾಗಾಗಿತ್ತು.  ಪೊಳಲಿಯಲ್ಲಿ  ಈ ಘಟನೆ ಭಾರೀ ಕುತೂಹಲ ಹಾಗೂ ಚರ್ಚೆಯ ವಿಷಯವಾಗಿದ್ದು, ಮಂಗಳವಾರವೂ ದೂರದೂರಿಂದ ಜನ ಆಗಮಿಸಿ ವೀಕ್ಷಿಸುತ್ತಿದ್ದರು. ಬಾವಿಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಇನ್ನೂ ಬಂದಿಲ್ಲ. ದ.ಕಜಿಪಂ ಅಧಿಕಾರಿಗಳ ತಂಡ ಮಂಗಳವಾರ ಸ್ಥಳಕಾಗಮಿಸಿ ಪರೀಶೀಲನೆ ನಡೆಸಿದ್ದು, ಬಾವಿಯಲ್ಲಿ ಬಿಸಿಯಾದ ನೀರಿನ ಮಾದರಿ ಹಾಗೂ ಸಮೀಪದ ಇತರ ಬಾವಿಗಳ ನೀರಿನ ಮಾದರಿಗಳನ್ನು ಜಿಲ್ಲಾ ಪಂಚಾಯತಿ ಅಂತರ್ಜಲ ಹಾಗೂ ಭೂಗರ್ಭ ಇಂಜಿನಿಯರ್ ವಿಭಾಗಕ್ಕೆ ತಪಾಸಣೆಗೆ ಕಳುಹಿಸಲಾಗಿದೆ. ಆದರೆ ಮನೆಮಂದಿಯಲ್ಲಿ ಇನ್ನೂ ಗೊಂದಲ ಹಾಗೂ ಆತಂಕ ಹಾಗೇಯೇ ಮುಂದುವರಿದಿದೆ.

See also  ವಿರಾಸತ್ ನಲ್ಲಿ ರಂಗೇರಿತು ಸುಖ್ವಿಂದರ್ ಸಿಂಗ್‍ನ "ಗಾನ ತರಂಗ"
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು