News Kannada
Sunday, September 25 2022

ಕರಾವಳಿ

ಮೂಡುಬಿದಿರೆಯಲ್ಲಿ ಸಿಐಟಿಯು ಜಾಥಾ, ಪ್ರತಿಭಟನೆ - 1 min read

Photo Credit :

ಮೂಡುಬಿದಿರೆಯಲ್ಲಿ ಸಿಐಟಿಯು ಜಾಥಾ, ಪ್ರತಿಭಟನೆ

ಮೂಡುಬಿದಿರೆ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್ ಗೆ ಪೂರಕವಾಗಿ ಮೂಡುಬಿದಿರೆಯಲ್ಲಿ ಸಿಐಟಿಯು ವತಿಯಿಂದ ಮುಖ್ಯ ರಸ್ತೆಯಲ್ಲಿ ಜಾಥಾ, ಬಸ್ ನಿಲ್ದಾಣದ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಯಿತು.

ಸಿಐಟಿಯು ನಾಯಕಿ ರಮಣಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಕಾರ್ಮಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಕಾರ್ಮಿಕರಿಗೆ ಸೂಕ್ತವಾದ ಸೌಲಭ್ಯ ದೊರೆಯದಿದಲ್ಲಿ ಮುಂದಿನ ದಿನಗಳಲ್ಲಿ ಪಾರ್ಲಿಮೆಂಟ್ ಎದುರೇ ಪ್ರತಿಭಟನೆ ಮಾಡಲಾಗುವುದು. ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಬಂದ್ ಗೆ ಹೆಚ್ಚಿನವರು ಬೆಂಬಲ ನೀಡುತ್ತಾರೆ. ಆದರೆ ಕೆಲವರು ಬೆಂಬಲ ನೀಡದೆ ಅಹಂಕಾರವನ್ನು ಪ್ರದರ್ಶಿಸುತ್ತಾರೆ. ಅಂತವರು ತಮ್ಮ ಕುಟುಂಬವರ್ಗದಲ್ಲಿರುವ ಕಾರ್ಮಿಕರ ಬಗ್ಗೆಯೂ ಯೋಚನೆ ಮಾಡಬೇಕು ಎಂದರು.

ಸಿಐಟಿಯು ಜಿಲ್ಲಾ ಮುಖಂಡ ಯಾದವ ಶೆಟ್ಟಿ ಮಾತನಾಡಿ, ಭರವಸೆಗಳ ಭವನ ಕಟ್ಟಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕರ ಏಳಿಗೆಗೆ ಶ್ರಮವಹಿಸುತ್ತಿಲ್ಲ. ಕಾರ್ಮಿಕ ಶ್ರಮವನ್ನು ಕಡೆಗಣಿಸಿ, ವಿದೇಶಿ ಕಂಪೆನಿಗಳಿಗೆ ಮಣೆ ಹಾಕುವ ನೀತಿಯನ್ನು ಅನುಸರಿಸುತ್ತಿದೆ. ಕಾರ್ಮಿಕ, ರೈತ ವಿರೋಧಿಗಳ ಮಸೂದೆಗಳನ್ನು ತಂದು `ಬಡ ಜನರ ಮರಣ ಶಾಸನ’ವನ್ನು ರೂಪಿಸುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡರಾದ ಶಂಕರ್, ರಾಧ, ಗಿರಿಜಾ ಸಹಿತ ಮೂಡುಬಿದಿರೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ಕಾರ್ಮಿಕರು ಭಾಗವಹಿಸಿದರು.

 

See also  ಅಕ್ರಮ ಮರ ಸಾಗಾಟ: ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು