News Kannada
Friday, September 30 2022

ಕರಾವಳಿ

ಕೊರಗ ಕುಟುಂಬಕ್ಕೆ ಭೇಟಿ ನೀಡಿ ಭರವಸೆ ನೀಡಿದ ಡಿಸಿ - 1 min read

Photo Credit :

ಕೊರಗ ಕುಟುಂಬಕ್ಕೆ ಭೇಟಿ ನೀಡಿ ಭರವಸೆ ನೀಡಿದ ಡಿಸಿ

ಬೆಳ್ತಂಗಡಿ: ಕೊರಗರು ಇದೇ ಜಾಗದಲ್ಲಿರುವುದಕ್ಕೆ ಯಾವೂದೇ ಆಕ್ಷೇಪ ಇಲ್ಲ. ಆದರೆ ಸರಕಾರ ನಿಮಗಾಗಿ ಬೇರೆ ಸ್ಥಳವನ್ನು ನಿಗದಿಪಡಿಸಲಿದೆ. ಆ ಸ್ಥಳ ನಿಮಗೆ ವಾಸಕ್ಕೆ ಯೋಗ್ಯ ಎಣಿಸಿದಲ್ಲಿ ಅಲ್ಲಿ ಹೋಗಿ ನೆಲೆಸಬಹುದು. ನಿಮಗೆ ಸುಮಾರು 4 ಸಾವಿರ ಅಡಿಗಳಷ್ಟು ಜಾಗವನ್ನು ಸರಕಾರ ವತಿಯಿಂದ ಗುರುತಿಸಿ ನೀಡಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಜಗದೀಶ್  ಶುಕ್ರವಾರ ಸುಲ್ಕೇರಿ ಗ್ರಾಮ ಪಂಚಾಯತ್  ವ್ಯಾಪ್ತಿಯ ನಾವರ ಗ್ರಾಮದ ಅಟ್ರಿಂಜೆ ಎಂಬಲ್ಲಿ ಕಾಡಿನಲ್ಲಿ ಪಾಸ್ಟಿಕ್ ಟರ್ಪಾಲ್ ಹಾಕಿ ವಾಸಿಸುತ್ತಿರುವ ಐದು ಕೊರಗ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಭರವಸೆ ನೀಡಿದರು.

ಕೊರಗರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಈ ಕಾಡಿನ ಪ್ರದೇಶದಲ್ಲಿ ನೀವು ಬಂದು ಕುಳಿತುಕೊಳ್ಳುವುದಕ್ಕೆ ಕಾರಣ ಏನು? ಹಿಂದೆ ವಾಸವಾಗಿದ್ದ ಸ್ಥಳ ಯಾವುದು? ಯಾವ ಕಾರಣಕ್ಕೆ ಇಲ್ಲಿ ಬಂದು ನೆಲೆಸಿದ್ದೀರಿ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೊರಗರ ಕುಟುಂಬದವರು ತಾವು ಬಾಡಿಗೆ ಮನೆಯಲ್ಲಿದ್ದ ಕಾರಣದಿಂದ ಇಲ್ಲಿ ಬಂದು ನೆಲೆಸಿರುವುದಾಗಿ ತಿಳಿಸಿದರು.

ನೀವು ಇಲ್ಲಿರುವುದಕ್ಕೆ ಯಾವೂದೇ ಆಕ್ಷೇಪ ಇಲ್ಲ. ಆದರೆ ಸರಕಾರ ನಿಮಗಾಗಿ ಬೇರೆ ಸ್ಥಳವನ್ನು ನಿಗದಿಪಡಿಸಲಿದೆ. ಆ ಸ್ಥಳ ನಿಮಗೆ ವಾಸಕ್ಕೆ ಯೋಗ್ಯ ಎಣಿಸಿದಲ್ಲಿ ಅಲ್ಲಿ ಹೋಗಿ ನೆಲೆಸಬಹುದು. ನಿಮಗೆ ಸುಮಾರು 4 ಸಾವಿರ ಅಡಿಗಳಷ್ಟು ಜಾಗವನ್ನು ಸರಕಾರ ವತಿಯಿಂದ ಗುರುತಿಸಿ ನೀಡಲಾಗುವುದು. ಮೊದಲಿಗೆ ನಿಮಗೆ  ಜಾಗಕ್ಕೆ ಹಕ್ಕುಪತ್ರ, ಮನೆ ನಿರ್ಮಾಣ, ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು. ಬಳಿಕ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ನೀಡಲಾಗುವುದು. ಅಲ್ಲಿ ನೀವು ನಿಮ್ಮ ಕುಲ ಕಸುಬುಗಳನ್ನು ಮಾಡಿಕೊಂಡು, ಆಡು, ಕೋಳಿ, ಹೈನುಗಾರಿಕೆ ಮಾಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊರಗ ಕುಟುಂಬದ ಹರೀಶ್ ಹಾಗೂ ಅಣ್ಣು ಎಂಬವರು ತನಗೆ ಕೃಷಿ ಮಾಡಲು ಜಾಗವನ್ನು ನೀಡುವಂತೆ ವಿನಂತಿಸಿದರು. ಆದರೆ ಅದಕ್ಕೆ ಜಿಲ್ಲಾಧಿಕಾರಿಗಳು ಯಾವೂದೇ ಕಾರಣಕ್ಕೂ ಕೃಷಿಗೆ ಬೇಕಾದಷ್ಟು ಜಾಗವನ್ನು ನೀಡಲು ಸಾಧ್ಯವಾಗುವುದಿಲ್ಲ. ಮೊದಲಿಗೆ ನೀವು ಆ ಜಾಗದ ಸಾಮಾನ್ಯ ನಿವಾಸಿ ಎಂಬುದು ಆಗಬೇಕು. ಬಳಿಕ ನಿಮಗೆ ಅಲ್ಲಿ ಹೆಚ್ಚುವರಿ ಜಾಗವನ್ನು ನೀಡಲು ಸಾಧ್ಯವಿದೆ. ಅಲ್ಲದೆ ನಿಮಗೆ ಬೇರೆ ಯಾವೂದೇ ರೀತಿಯ ಉದ್ಯೋಗ ಮಾಡುವುದಕ್ಕಾಗಿ ತರಬೇತಿಯನ್ನು ನೀಡಲು ಕೂಡಾ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಲಾಗುವುದು ಎಂದರು.

ಆದರೆ ನೀವು ಈಗ ಇರುವ ಜಾಗದಲ್ಲೇ ಇರುವುದಾಗಿ ತಿಳಿಸಿದರೆ ನಿಮಗೆ ಇಲ್ಲಿಯೇ ಉಳಿಯಲು ವ್ಯವಸ್ಥೆ ಮಾಡಲಾಗುವುದು. ಮನೆಗೆ ಯಾರೂ ಒತ್ತಾಯ ಮಾಡುವುದಿಲ್ಲ. ಆದರೆ ಇಲ್ಲಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಕಷ್ಟವಾಗಬಹುದು ಎಂದರು.

ಇಲ್ಲಿರುವ ಕೊರಗ ಕುಟುಂಬದ ಇಚ್ಚೆಗೆ ವಿರುದ್ದವಾಗಿ ಯಾವುದೇ ರೀತಿಯ ತೊಂದರೆ ನೀಡುವುದಾಗಿ, ತೆರೆವುಗೊಳಿಸುವದಾಗಲಿ ಮಾಡದಂತೆ ತಹಸೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಡಿಸಿಯವರು ಸ್ಥಳದಲ್ಲೇ ಎಚ್ಚರಿಕೆ ನೀಡಿದ್ದಾರೆ.

ಪುತ್ತೂರು ಸಹಾಯಕ ಕಮೀಷನರ್ ಡಾ. ರಾಜೇಂದ್ರ, ತಹಸೀಲ್ದಾರ್ ತಿಪ್ಪೆಸ್ವಾಮಿ, ಕಂದಾಯ ನಿರೀಕ್ಷಕ ದೊಡ್ಡಮನಿ, ಸಮಾಜ ಕಲ್ಯಾಣಧಿಕಾರಿ ಮೋಹನ್, ಹೇಮಲತಾ ಇದ್ದರು.

See also  ಕಾರು-ಬೈಕ್ ಡಿಕ್ಕಿ: ಇಬ್ಬರ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು