News Kannada
Friday, September 30 2022

ಕರಾವಳಿ

ಮಾಳ ಸಿಎ ಬ್ಯಾಂಕಿನ ಬಜಗೋಳಿ ಶಾಖೆಯಲ್ಲಿ 3.26 ಕೋ.ರೂ ಅವ್ಯವಹಾರ - 1 min read

Photo Credit :

ಮಾಳ ಸಿಎ ಬ್ಯಾಂಕಿನ ಬಜಗೋಳಿ ಶಾಖೆಯಲ್ಲಿ 3.26 ಕೋ.ರೂ ಅವ್ಯವಹಾರ

ಕಾರ್ಕಳ: ಕಳೆದ ಒಂದು ವರ್ಷದ ಅವಧಿಯಲ್ಲಿ ಕಾರ್ಕಳ ತಾಲೂಕಿನ ಮಾಳ ವ್ಯವಸಾಯಿಕ ಬ್ಯಾಂಕಿನ ಬಜಗೋಳಿ ಶಾಖೆಯಲ್ಲಿ ನಡೆದಿರುವ 3.26 ಕೋಟಿಗೂ ಮಿಕ್ಕಿ ಅವ್ಯವಹಾರವಾಗಿರುವ ವಿಚಾರ ಲೆಕ್ಕಪರಿಶೋಧನೆಯಲ್ಲಿ ಬಹಿರಂಗವಾಗಿದ್ದು ಈ ಕುರಿತು ಮಾಳದಲ್ಲಿ ನಡೆದ ಬ್ಯಾಂಕಿನ ಮಹಾಸಭೆಯಲ್ಲಿ ಈ ವಿಚಾರವಾಗಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಬ್ಯಾಂಕಿನ ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಇಷ್ಟೊಂದು ಮೊತ್ತ ಭಾರೀ ಹಗರಣ ಹೇಗೆ ನಡೆಯಲು ಸಾಧ್ಯ,ಇದಕ್ಕೆ ಆಡಳಿತ ಮಂಡಳಿ ಹೊಣೆಗಾರಿಕೆ ವಹಿಸಬೇಕಿದೆ ಎಂದು ಗ್ರಾಹಕರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಅವ್ಯವಹಾರವೆಸಗಿರುವ ಬ್ಯಾಂಕಿನ ಸಿಬ್ಬಂದಿಗಳಿಂದ ವಸೂಲಾತಿಗೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಈ ಕುರಿತು ಬ್ಯಾಂಕಿನ ಅಧ್ಯಕ್ಷ ವೀರೇಶ್ವರ ಜೋಷಿ ಸ್ಪಷ್ಟನೆ ನೀಡಿ ಕಳೆದ ಒಂದು ವಷರ್ಧ ಅವಧಿಯಲ್ಲಿ ಬಜಗೋಳಿ ಶಾಖೆಯಲ್ಲಿ ಚಿನ್ನ ಅಡಮಾನ ಸಾಲ,ನಿರಖು ಠೇವಣಿ ಹಾಗೂ ಸಾಲ ನಿಡಿಕೆಯಲ್ಲಿ ಸುಮಾರು 3.26 ಕೋ.ರೂ ಅವ್ಯವಹಾರವಾಗಿರುವುದು ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿದ್ದು, ಈ ಕುರಿತಂತೆ ಬಜಗೋಳಿ ಶಾಖೆಯ ವ್ಯವಸ್ಥಾಪಕ ಪುಷ್ಪರಾಜ್ ಶೆಟ್ಟಿ, ವಿರುದ್ದ ಸೂಕ್ತ ಕ್ರಮ ಜರುಗಿಸಲು ಬ್ಯಾಂಕ್ ಮುಂದಾಗಿದೆ. ಈ ಪೈಕಿ ಅಕ್ರಮವೆಸಗಿದವರಿಂದ 40 ಲಕ್ಷ ರೂಗಳ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ಬರೆಯಿಸಿಕೊಳ್ಳಲಾಗಿದ್ದು,ಬ್ಯಾಂಕಿಗೆ ಬರಬೇಕಾದ 2.86 ಕೋ.ರೂ ವಸೂಲಾತಿಯನ್ನು ಕಾನೂನು ಹೋರಾಟದ ಮೂಲಕ ಮಾಡಲಾಗುವುದೆಂದರು.
ಬ್ಯಾಂಕಿನಲ್ಲಿ ನಡೆದಿರುವ ಬೃಹತ್ ಮೊತ್ತದ ಅವ್ಯವಹಾರದಲ್ಲಿ ಕೇವಲ ವ್ಯವಸ್ಥಾಪಕರನ್ನೇ ಹೊಣೆಗಾರರನ್ನಾಗಿಸುವುದು ಸರಿಯಲ್ಲ ಅಲ್ಲದೇ 3.26 ಕೋ.ರೂ ಅವ್ಯವಹಾರ ಅತ್ಯಲ್ಪ ಅವಧಿಯಲ್ಲಿ ನಡೆಯಲು ಕಾರಣಕರ್ತರು ಯಾರು ಮತ್ತು ಇಷ್ಟೆಲ್ಲಾ ಅವ್ಯವಹಾರ ನಡೆಯುವಾಗ ಆಡಳಿತ ಮಂಡಳಿ ಯಾಕೆ ಸಮ್ಮನಾಗಿತ್ತು ಎಂದು ಸಭೆಯಲ್ಲಿ ಬ್ಯಾಂಕಿನ ಸದಸ್ಯರು ಅನುಮಾನ ವ್ಯಕ್ತಪಡಿಸಿದರು. ಈ ಅವ್ಯವಹಾರದ ಹಿಂದಿರುವ ಕಾಣದ ಕೈಗಳ ಕುರಿತು ಸೂಕ್ತ ತನಿಖೆ ನಡೆಸಬೇಕೆನ್ನುವ ಒತ್ತಾಯ ಸಭೆಯಲ್ಲಿ ವ್ಯಕ್ತವಾಯಿತು.

ಡಿವಿಡೆಂಟ್ ನೀಡಿದ ಬ್ಯಾಂಕಿನ ವಿರುದ್ದ ಸದಸ್ಯರ ಆಕ್ರೋಶ
ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಮಾಳ ಸಿಎ ಬ್ಯಾಂಕ್ ಇದೀಗ ರೈತರ ಬ್ಯಾಂಕ್ ಆಗದೇ ಕೇವಲ ಹಣ ಮಾಡುವ ಕೇಂದ್ರವಾಗಿದೆ. ರೈತರು ಕಷ್ಟಪಟ್ಟು ಬೆಳೆಸಿದ ಸಂಸ್ಥೆಯಲ್ಲಿ ಇಂದು ಭಾರೀ ಮೊತ್ತ ಅವ್ಯವಹಾರ ನಡೆದಿದೆ. ಆದರೆ ರೈತರಿಗೆ ಒಂದು ನಯಾಪೈಸೆ ಲಾಭಾಂಶ ನೀಡಲಾಗಿದೆಯೇ ಎಂದು ಸದಸ್ಯರು ಬ್ಯಾಂಕಿನ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಎಆರ್ ಕೋರ್ಟ್ ನಲ್ಲಿ ದಾವೆ
ಬಜಗೋಳಿ ಶಾಖೆಯಲ್ಲಿ ಅವ್ಯವಹಾರ ನಡೆಸಿರುವ ಪ್ರಕರಣದ ಆರೋಪಿಯಾಗಿರುವ ಶಾಖಾ ವ್ಯವಸ್ಥಾಪಕ ಪುಷ್ಪರಾಜ್ ಶೆಟ್ಟಿಯ ವಿರುದ್ಧ 2016 ಮೇ ತಿಂಗಳಿನಲ್ಲಿ ಕುಂದಾಪುರದಲ್ಲಿ ಇರುವ ಸಹಾಯಕ ಉಪನಿರ್ಬಂಧಕ ಕಚೇರಿಯ ನ್ಯಾಯಾಲಯ (ಎ.ಆರ್.ಕೋರ್ಟ್)ಗೆ ದಾವೆ ಹೂಡಲಾಗಿದೆ.
 

See also  ತಲಪಾಡಿಯಲ್ಲಿ ಟೋಲ್ ಸಂಗ್ರಹ ವಿರೋಧ: ಎರಡನೇ ದಿನಕ್ಕೆ ಮುಂದುವರಿದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು