News Kannada
Wednesday, October 05 2022

ಕರಾವಳಿ

ಎಕರೆಗಟ್ಟೆಲೇ ಭತ್ತ ಕೃಷಿ ಇದ್ದರೂ ಕಟಾವಿಗೆ ಕಾರ್ಮಿಕರಿಲ್ಲ! - 1 min read

Photo Credit :

ಎಕರೆಗಟ್ಟೆಲೇ ಭತ್ತ ಕೃಷಿ ಇದ್ದರೂ ಕಟಾವಿಗೆ ಕಾರ್ಮಿಕರಿಲ್ಲ!

ಕಾಸರಗೋಡು: ಕಾಲ ಬದಲಾದಂತೆ ಕೃಷಿಯಲ್ಲೂ ಬದಲಾವಣೆ ಕಂಡು ಬರುತ್ತಿದೆ. ಶೇಕಡಾ 7೦ ರಷ್ಟು ಕೃಷಿ ಇಲ್ಲವಾಗಿದೆ. ಇರುವ ಕೃಷಿಗೂ ಕಾರ್ಮಿಕರ  ಕೊರತೆ .  ಕೆಲ ಸ್ಥಳಗಳಲ್ಲಿ  ಸಾಂಪ್ರದಾಯಿಕವಾಗಿ ಎಕರೆಗಟ್ಟೆಲೇ  ಭತ್ತ ಕೃಷಿ ಇಂದಿಗೂ ಮಾಡಲಾಗುತ್ತಿದೆ.

ಆದರೆ ಊರಿನಲ್ಲಿ ಕಾರ್ಮಿಕರ  ಕೊರತೆ ಹಿಂದಿನ ಕಾಲದಲ್ಲಿ  ಗದ್ದೆ  ಉಳಲು , ನೇಜಿ ನೆಡಲು , ಕಟಾವಿಗೆ ಸಾಕಷ್ಟು ಕಾರ್ಮಿಕರು ಲಭಿಸುತ್ತಿದ್ದರು. ಆದರೆ ಇಂದು ಕಾರ್ಮಿಕರೇ ಇಲ್ಲ. ಈಗಿನ ಯುವ ಜನಾಂಗಕ್ಕೆ  ಭತ್ತ ಕೃಷಿಯಲ್ಲಿ ತಿಳುವಳಿಕೆ ಹಾಗೂ ಆಸಕ್ತಿ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲಿ ನಮಗೆ ಉತ್ತರ ಭಾರತದ ಕಾರ್ಮಿಕರೇ ಭತ್ತ ಕೃಷಿಗೆ  ಅನಿವಾರ್ಯವಾಗಿದ್ದಾರೆ . ಈಗಾಗಲೇ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಕೆಲಸಕ್ಕೂ ಆಶ್ರಯಿಸಿಕೊಂಡಿರುವ  ಉತ್ತರ ಭಾರತದವರು ಗದ್ದೆಗಿಳಿದು ಕೆಲಸ ಮಾಡಬೇಕಾದ ಸ್ಥಿತಿ ನಮ್ಮದಾಗಿದೆ .

ಕಾಸರಗೋಡಿನ ಅಂಬು ಎಂಬವರು ಒಂದು ಎಕರೆಗೂ ಅಧಿಕ ಸ್ಥಳದಲ್ಲಿ ಭತ್ತ ಕೃಷಿ  ನಡೆಸಿದ್ದರು. ಆದರೆ ಕಟಾವಿಗೆ ಕಾರ್ಮಿಕರೇ ಲಭಿಸಿಲ್ಲ.  ಮಹಿಳೆಯರು ಮಾತ್ರವಲ್ಲಿ ಪುರುಷ ಕಾರ್ಮಿಕರು ಲಭಿಸಲಿಲ್ಲ. ಕೊನೆಗೆ  ಬಂಗಾಳಿಯಿಂದ  ಬಂದ  ಕಾರ್ಮಿಕರಿಕರ ಸಹಾಯ ಕೇಳಬೇಕಾಯಿತು. ಹಿಂದಿ ಹಾಡು  ಕೇಳುವ ಮೂಲಕ ಈ  ಕಾರ್ಮಿಕರು  ಗೆದ್ದೆಗಿಳಿದು ಕಟಾವು  ನಡೆಸಿದ್ದು, ಕೊನೆಗೂ ಊರಿನಲ್ಲಿ ಕಾರ್ಮಿಕರ ಕೊರತೆ ಇದ್ದರೂ ಉತ್ತರ ಭಾರತದ ಕಾರ್ಮಿಕರೇ  ಗತಿ  ಎಂದು  ನಿಟ್ಟಿಸಿರು ಬಿಡುವಂತಾಗಿದೆ. ಹಿಂದೆ ನೇಜಿ ನೆಡಲು ಸೇರಿದಂತೆ ಭತ್ತ ಕೃಷಿಗೆ ಶೋಭಾನೆ ಹಾಡುಗಳು ಕೇಳಿ ಬರುತ್ತಿದ್ದಲ್ಲಿ ಮುಂದೆ ಹಿಂದಿ ಹಾಡುಗಳು ಈ ಸಂದರ್ಭದಲ್ಲಿ ಮನಸೆಳೆಯಲಿದೆ.

ಜಾರ್ಖಾಂಡ್ ನ  ಇರ್ಷಾದ್ ಮತ್ತು  ಇಶಾಕ್  ಭತ್ತ ಕಟಾವು ನಡೆಸಿದ್ದು, ಬೆಳಿಗ್ಗೆ  9 ಗಂಟೆಯಿಂದ ಸಂಜೆ 6 ಗಂಟೆ ತನಕ ಕಟಾವು ನಡೆಸುತ್ತಿದ್ದಾರೆ. ಊರಿನಿಂದ ತಂಡ ವಿಶೇಷ  ಕತ್ತಿಯಿಂದ  ಕಟಾವು ನಡೆಸುತ್ತಿದ್ದಾರೆ. ಕಟಾವು ಮಾಡಿದ ಪೈರನ್ನು ಕಟ್ಟ ( ಸೂಡಿ) ಮಾಡಲು ಇವರಿಗೆ  ಸಾಧ್ಯವಾಗುತ್ತಿಲ್ಲ. ಇದರಿಂದ ಅಂಬುರವರ  ಪತ್ನಿ ಸುಶೀಲಾ ಮತ್ತು  ಪುತ್ರ  ಶ್ಯಾಮ್ ಕೆಲಸ ನಿರ್ವಹಿಸುತ್ತಿದ್ದಾರೆ. ಕಟಾವು ಮಾಡಿ ಮನೆಗೆ ತಲುಪಿಸಿದ ಬಳಿಕ ಬೇರ್ಪಡಿಸುವ ಸೇರಿದಂತೆ  ಉಳಿದ ಕೆಲಸ ಕಾರ್ಯವನ್ನು ಬಂಗಾಳಿ ಕಾರ್ಮಿಕರೇ ಮಾಡುತ್ತಾರೆ.

ಯಾವುದೇ ಕೃಷಿ ಕಾರ್ಯಕ್ಕೆ  ಇಂದು  ಕಾರ್ಮಿಕರದ್ದೇ ಕೊರತೆಯದ್ದೇ  ಸಮಸ್ಯೆ. ಇಂತಹ ಸಂದರ್ಭದಲ್ಲಿ ಹೊರರಾಜ್ಯದ ಕಾರ್ಮಿಕರು ಲಭಿಸುತ್ತಿರುವುದು ಕೃಷಿಕರಿಗೆ ನೆಮ್ಮದಿ.  ಕಟಾವಿಗೆ ತಲುಪಿದ  ಸಂದರ್ಭದಲ್ಲಿ ಮಳೆ ಬಂದಲ್ಲಿ  ಪೈರು ನೆಲಕಚ್ಚಿ ಹೋಗುತ್ತಿದೆ. ಭತ್ತ ಕೃಷಿ ನಡೆಸಿದರೂ ಸಮಸ್ಯೆ ಕಾರ್ಮಿಕರದ್ದು , ಇಂತಹ ಸಂದರ್ಭದಲ್ಲಿ  ಹೊರ ರಾಜ್ಯ ಕಾರ್ಮಿಕರನ್ನೇ  ಅವಲಂಬಿಸಬೇಕಾದ ಸ್ಥಿತಿ ಉಂಟಾಗಲಿದೆ.

See also  ಗುರು- ಗುರಿಯನ್ನು ಸೇರುವುದು ಹಿಂದೂಗಳ ಜೀವನ ಧರ್ಮ- ಕುಂಟಾರು ರವೀಶ ತಂತ್ರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು