News Kannada
Friday, October 07 2022

ಕರಾವಳಿ

ಅಣಂಗೂರಿನಲ್ಲಿ ಮದ್ಯದಂಗಡಿ: ನಾಗರಿಕರ ವಿರೋಧ - 1 min read

Photo Credit :

ಅಣಂಗೂರಿನಲ್ಲಿ ಮದ್ಯದಂಗಡಿ: ನಾಗರಿಕರ ವಿರೋಧ

ಕಾಸರಗೋಡು: ಕಾಸರಗೋಡು ನಗರ ಹೊರವಲಯದ ಅಣಂಗೂರಿನಲ್ಲಿ ಸರಕಾರದ ಸ್ವಾಮ್ಯದ ಬಿವರೇಜಸ್ ಮದ್ಯದಂಗಡಿ ತೆರೆಯುವುದರ ವಿರುದ್ಧ ನಾಗರಿಕರು ಹೋರಾಟಕ್ಕೆ ದುಮುಕಿದ್ದು, ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜನವಾಸ ಪ್ರದೇಶವಾದ ಇಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬುಧವಾರದಿಂದ ಮದ್ಯದಂಗಡಿ ಕಾರ್ಯಾರಂಭಗೊಳ್ಳಬೇಕಿತ್ತು. ಮದ್ಯಸಹಿತ ಬಂದ ಲಾರಿಯನ್ನು ತಡೆದ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಇದರಿಂದ ಮದ್ಯದಂಗಡಿ ತೆರೆಯಲು ಸಾಧ್ಯವಾಗಲಿಲ್ಲ. ಕಾಸರಗೋಡು ನಗರದ ಐ.ಸಿ ಭಂಡಾರಿ ರಸ್ತೆಯಲ್ಲಿರುವ ಮದ್ಯದಂಗಡಿಯನ್ನು ನಗರ ಹೊರವಲಯದ ಅಣಂಗೂರಿನ ಜನವಾಸ ಕೇಂದ್ರಕ್ಕೆ ವರ್ಗಾಯಿಸರುವುದು ಇದೀಗ ಅಣಂಗೂರು ನಿವಾಸಿಗಳ ನಿದ್ದೆಗೆಡಿಸಿದೆ.

ಅಣಂಗೂರು ತಾಲೂಕು ಆಸ್ಪತ್ರೆಯಿಂದ ೫೦ಮೀಟರ್ ನಷ್ಟು ದೂರದಲ್ಲಿ ಮದ್ಯದಂಗಡಿ ತೆರೆಯಲಾಗುತ್ತಿದ್ದು, ಪರಿಸರದಲ್ಲಿ ೩೦೦ರಷ್ಟು ಮನೆಗಳಿವೆ. ದೇವಸ್ಥಾನ, ಪರಿಶಿಷ್ಟ ಪಂಗಡ ಹೆಣ್ಮಕ್ಕಳ ವಸತಿ ನಿಲಯ, ಅಂಗವಾಡಿ ಮೊದಲಾದವು ಪರಿಸರದಲ್ಲಿದೆ. ನೂರಾರು ವಿದ್ಯಾರ್ಥಿನಿಗಳು, ಹೆಣ್ಮಕ್ಕಳು, ಮಹಿಳೆಯರು ಈ ದಾರಿಯಾಗಿ ತೆರಳುತ್ತಿದ್ದಾರೆ. ಮದ್ಯದಂಗಡಿ ತೆರೆಯುದರಿಂದ ಭೀತಿಯಲ್ಲೇ ಇವರು ನಡೆದಾಡಬೇಕಾದ ಸ್ಥಿತಿ ಉಂಟಾಗಲಿದೆ. ಇದರಿಂದ ಮದ್ಯದಂಗಡಿ ವಿರುದ್ಧ ನಾಗರಿಕರು ಹೋರಾಟ ಸಮಿತಿ ರಚಿಸಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯ ಅಬಕಾರಿ ಸಚಿವ , ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು , ಪರಿಶೀಲಿಸುವ ಭರವಸೆ ಲಭಿಸಿದೆ. ಆದರೆ ನಮ್ಮ ಬೇಡಿಕೆ ಈಡೇರಿಕೆ ಮುಂದಾಗಿಲ್ಲ.  ಇದರಿಂದ ಹೋರಾಟ ನಡೆಸುತ್ತಿರುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಶಾಸಕ ಎನ್.ಏ ನೆಲ್ಲಿಕುನ್ನು ಪ್ರತಿಭಟನೆಗೆ  ಬೆಂಬಲ ಸೂಚಿಸಿದ್ದು, ಮದ್ಯದಂಗಡಿ ತೆರೆಯದಂತೆ ಸರಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಗಂಜಿ ಬೇಯಿಸುವ ಮೂಲಕ ಶಾಸಕ ನೆಲ್ಲಿಕುನ್ನು ರವರು ಹೋರಾಟಕ್ಕೆ ಬೆಂಬಲಿ ಸೂಚಿಸಿದರು.

ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸಮಿತಿ ಮುಂದಾಗಿದ್ದು,  ಹೋರಾಟ ಸಮಿತಿ ಸಂಚಾಲಕ ಎ. ಸತೀಶ್, ಕುಞಕೃಷ್ಣನ್ ಮಾಸ್ಟರ್, ವೇಣು ಕಣ್ಣನ್, ಸಜಿ ಮ್ಯಾಥ್ಯೂ, ಜಾನಕಿ ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದಾರೆ.

See also  ವಿವಿಧ ಹಿಂದೂ ಉತ್ಸವಗಳು ಒಂದೇ ದಿನಕ್ಕೆ ಸೀಮಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು