News Kannada
Saturday, October 08 2022

ಕರಾವಳಿ

ಒಬ್ಬ ಹಿಂದು ಮತ್ತೊಬ್ಬ ಮುಸ್ಲಿಂ…ಮಾನವೀಯತೆಗೆ ಜಾತಿ ಮತದ ಹಂಗಿಲ್ಲ - 1 min read

Photo Credit :

ಒಬ್ಬ ಹಿಂದು ಮತ್ತೊಬ್ಬ ಮುಸ್ಲಿಂ...ಮಾನವೀಯತೆಗೆ ಜಾತಿ ಮತದ ಹಂಗಿಲ್ಲ

ಬಂಟ್ವಾಳ; ಮಾನವೀಯತೆಗೆ ಜಾತಿ-ಮತದ ಹಂಗಿಲ್ಲ.. ಶುಭ್ರಮನಸ್ಸು ಮಾತ್ರ ಒಳ್ಳೆಯ ಕಾರ್ಯಕ್ಕೆ ಪ್ರೇರಣೆ ನೀಡಬಲ್ಲುದು ಎಂಬುದಕ್ಕೆ ಉದಾಃರಣೆಯಂತಿದ್ದಾರೆ. ಬಾಳ್ತಿಲ ಗ್ರಾಮದ ಹಮೀದ್ ಮತ್ತು ಶಿವ ಕುಮಾರ್. ಕೈಗೆ ಸಿಕ್ಕಿದ ಸುಮಾರ್ 380 ಗ್ರಾಂ ತೂಕದ ಬಂಗಾರವನ್ನು ವಾರೀಸುದಾರರಿಗೆ ಮರಳಿ ತಲುಪಿಸಿದ ಈರ್ವರ ಕಾರ್ಯವೈಖರಿ ಇದೀಗ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.

ಏನು ವಿಷಯ..?

ಈತನ ಹೆಸರು ಹಮೀದ್, ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರುಪಾದೆ ನಿವಾಸಿ. ನ.13 ರಂದು ಇವರಿಗೆ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಕವರ್ ಪೇಪರ್ ನಲ್ಲಿ ಸುತ್ತಿದ ಒಂದು ವಸ್ತು ಸಿಗುತ್ತದೆ, ಆಗ ಅದನ್ನು ಬಿಡಿಸಿ ನೋಡಿದಾಗ ಅದರಲ್ಲಿ ಬರೋಬ್ಬರಿ ಸುಮಾರು ಚಿನ್ನಾಭರಣಗಳು ಕಾಣಿಸುತ್ತಿದೆ. ಆಗ ಅವರಿಗೆ ಒಂದು ತರಹದ ಶಾಕ್, ಜೊತೆಗೆ ಏನು ಮಾಡಬೇಕೆಂದು ಒಮ್ಮೆಲೆ ಗಡಿಬಿಡಿ, ಆ ಆಭರಣಗಳ ಮೇಲೆ ನಾಗನ ಚಿತ್ರಗಳು ಇದ್ದುದನ್ನು ಕಂಡ ಹಮೀದ್ ರವರು ಕೂಡಲೇ ಬಾಳ್ತಲ ಗ್ರಾಮ ಪಂಚಾಯ್ತಿ ಸದಸ್ಯ ಶಿವಕುಮಾರ್ ರವರಲ್ಲಿ ತಂದು ತೋರಿಸಿ ಇವುಗಳನ್ನೊಮ್ಮೆ ಅವುಗಳ ಮಾಲೀಕರಿಗೆ ತಲುಪಿಸುವಂತೆ ಕೋರಿದರು, ಆಗ ಶಿವಕುಮಾರ್ ಸಹ ಕೂಡಲೇ ಹಮೀದ್ ರವರೊಂದಿಗೆ ಬಂಟ್ವಾಳ ನಗರ ಠಾಣೆಗೆ ಅಷ್ಟೂ ಚಿನ್ನಧಾಭರಣಗಳನ್ನು ಒಪ್ಪಿಸಿ ಅವುಗಳ ಮಾಲೀಕರಿಗೆ ತಲುಪಿಸುವಂತೆ ಕೋರಿದರು.

ಈ ನಡುವೆ ಸೋಮವಾರ  ಪಾಣೆಮಂಗಳೂರಿನ ನರಸಿಂಹ ಪ್ರಭು ಎಂಬುವರು ತಮ್ಮ ಚಿನ್ನಾಭರಣ ಕಳೆದುಕೊಂಡಿದ್ದರ ಬಗ್ಗೆ ನಗರ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ಅವರು ಕಳೆದು ಕೊಂಡ ಆಭರಣಗಳ ಮಾದರಿಗಳನ್ನು ತಿಳಿಸಿದರು, ಚಿನ್ನ ಕಳೆಕೊಂಡವರು ಇವರೇ ಎಂದು ಪೊಲೀಸರಿಗೆ ಧೃಡಪಟ್ಟ ಬಳಿಕ ಹಮೀದ್, ಶಿವಕುಮಾರ್ ಇವರನ್ನು ಕರೆಯಿಸಿ ಅವರ ಸಮಕ್ಷಮ ವಾರೀಸುದಾರರಿಗೆ  ಚಿನ್ನಾಭರಣಗಳನ್ನು ಒಪ್ಪಿಸಲಾಯಿತು.

ಹಮೀದ್ ಅವರ ನಿಷ್ಕಲ್ಮಷವಾದ ಪ್ರಾಮಾಣಿಕತೆ, ಶಿವಕುಮಾರ್ ರವರು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಅವರ ಸಾಮಾಜಿಕ ಬದ್ದತೆ ಮತ್ತು ಕಳಕಳಿ ಬಗ್ಗೆ ಸಾರ್ವತ್ರಕ ಪ್ರಶಂಸೆ ವ್ಯಕ್ತವಾಗಿದೆ. ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

 

See also  ಸಾಧನೆಗೆ ಪ್ರಯತ್ನ ಹಾಗೂ ದೃಢಕಾಯ ದೇಹ ಅಗತ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು