ಕಾಸರಗೋಡು: ಪುಟಾಣಿಗಳಿಬ್ಬರು ಬಿದ್ದು ಮೃತಪಟ್ಟ ದಾರುಣ ಘಟನೆ ಮಂಗಳವಾರ ಬೆಳಿಗ್ಗೆ ಬದಿಯಡ್ಕ ಪಿಲಾಂಕಟ್ಟೆ ಯಲ್ಲಿ ನಡೆದಿದೆ.
ಪಿಲಾಂಕಟ್ಟೆಯ ಹಮೀದ್ ರವರ ಪುತ್ರ ರಂಸಾನ್ (4) ಮತ್ತು ಶಬೀರ್ ರವರ ಪುತ್ರ ನಸ್ವಾನ್ (2) ಮೃತಪಟ್ಟ ಪುಟಾಣಿಗಳು.
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ನಾಪತ್ತೆಯಾದುದರಿಂದ ಮನೆಯವರು ಹುಡುಕಾಡಿದ್ದು, ಕೊನೆಗೆ ಮನೆಯಂಗಳದ ಬಾವಿಯನ್ನು ನೋಡಿದಾಗ ದಾರುಣ ಘಟನೆ ಬೆಳಕಿಗೆ ಬಂದಿದೆ.
ಬಾವಿ ಸುಮಾರು ೧೫ ಅಡಿ ಆಳ ಹೊಂದಿದ್ದು, ನಾಲ್ಕು ಅಡಿಯಷ್ಟು ನೀರು ಇದೆ. ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಬಾವಿಗಿಳಿದು ಇಬ್ಬರನ್ನು ಮೇಲಕ್ಕೆತ್ತಿ ಹೊರತೆಗೆದು ಬದಿಯಡ್ಕದ ಸುಮದಾಯ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದರು.
ಬಾವಿಗೆ ಐದು ಅಡಿ ಆವರಣ ಇದ್ದು, ಬಾವಿ ಸಮೀಪ ಜಲ್ಲಿಕಲ್ಲುಗಳನ್ನು ರಾಶಿ ಹಾಕಲಾಗಿದೆ. ಇದರ ಮೂಲಕ ಹತ್ತಿರಬಹುದು ಎಂದು ಸಂಶಯಿಸಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಲಿಕೊಂಡಿದ್ದಾರೆ.
ಮೃತದೇಹಗಳನ್ನು ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಜರು ನಡೆಸಲಾಯಿತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸದೆ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.
.