ಶಿರ್ವ: ಅವರ್ ಲೇಡಿ ಆಫ್ ಹೆಲ್ತ್ ಚರ್ಚ್, ಶಿರ್ವದಲ್ಲಿನ ಸೈಂಟ್ ಆ್ಯಂಟನಿ ಪ್ರತಿಮೆಯನ್ನು ಕಿಡಿಗೇಡಿಗಳು ಅಪವಿತ್ರಗೊಳಿಸಿದ ಘಟನೆ ಭಾನುವಾರ ನಡೆದಿದೆ.
ಚರ್ಚಿನ ಜಗುಲಿಯಲ್ಲಿದ್ದ ಸೈಂಟ್ ಆ್ಯಂಟನಿ ಪ್ರತಿಮೆಯು ಒಡೆದು ಚೂರು ಚೂರಾಗಿದ್ದು, ಸರಿಸುಮಾರು 3.30 ರ ಸಮಯಕ್ಕೆ ಸ್ಥಳೀಯ ನಿವಾಸಿಯೊಬ್ಬರು ಚರ್ಚಿಗೆ ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಫಾ. ಸ್ಟೇನಿ ತಾರ್ವೋ ಹೇಳಿದರು.
ಶ್ವಾನದಳದೊಂದಿಗೆ ಸ್ಥಳಕ್ಕಾಗಮಿಸಿದ ಪೋಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.