News Kannada
Saturday, December 10 2022

ಕರಾವಳಿ

ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಲು ನಿರಂತರ ಹೋರಾಟ ಅಗತ್ಯ: ಆಸ್ಕರ್ ಫೆರ್ನಾಂಡಿಸ್

Photo Credit :

ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಲು ನಿರಂತರ ಹೋರಾಟ ಅಗತ್ಯ: ಆಸ್ಕರ್ ಫೆರ್ನಾಂಡಿಸ್

ಕಾಸರಗೋಡು: ಬದಿಯಡ್ಕದಲ್ಲಿ ನಡೆಯುತ್ತಿರುವ ವಿಶ್ವ ತುಳುವೆರೆ ಆಯನೊದ ಮೂರನೇ ದಿನವಾದ ಆದಿತ್ಯವಾರ ಸಂಭ್ರಮದ ಮೆರವಣಿಗೆ ನಡೆಯಿತು.

೬೦ ರಷ್ಟು ಸಮುದಾಯಗಳ ಅಪೂರ್ವ ಸಂಗಮವಾಗಿ ಮೆರವಣಿಗೆ ಸಾಕ್ಷಿಯಾಯಿತು. ಬದಿಯಡ್ಕ ನವಜೀವನ ಶಾಲಾ ಪರಿಸರದಿಂದ ಹೊರಟ ಮೆರವಣಿಗೆ ಬದಿಯಡ್ಕ ಪೇಟೆಯ ಮೂಲಕ ಸಾಗಿ ಸಮಾವೇಶ ನಗರವಾದ ಬದಿಯಡ್ಕ ಬೋಳುಕಟ್ಟೆಯ ಕ್ರೀಡಾಂಗಣದಲ್ಲಿ ಸಂಗಮಿಸಿತು.

ಶುಕ್ರವಾರ ಬದಿಯಡ್ಕ ನಾಗಬೆಮ್ಮೆರೆ ಪದವಿನ ತುಳುವೇಶ್ವರ ಚಾವಡಿಯಲ್ಲಿ ಆರಂಭಗೊಂಡ ಸಮ್ಮೇಳನಕ್ಕೆ ಆದಿತ್ಯವಾರ (ಇಂದು) ಸಂಭ್ರಮದ ಮೆರವಣಿಗೆಯೊಂದಿಗೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾಷೆ ಮುಖ್ಯವಲ್ಲ ನಾವೆಲ್ಲಾ ಒಂದೇ ಎಂಬುದನ್ನು ಮನಗಾಣಬೇಕು. ಎಲ್ಲಾ ಭಾಷೆಗಳು ಪರಸ್ಪರ ಆಶಯ ವಿನಿಮಯ ಮಾಡುವಂತಹದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ರವರು, ಮಾತನಾಡಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಲು ನಿರಂತರ ಹೋರಾಟ ಅಗತ್ಯ. ಅದೇ ರೀತಿ ಸಂಸ್ಕೃತಿಯನ್ನು ಉಳಿಸಿಕೊಂಡು ಬರಬೇಕಿದೆ ಎಂದರು.

ತುಳುವೆರೆ ಅಯನೋ ಅಧ್ಯಕ್ಷ ಸರ್ವವೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ  ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು, ಕರ್ನಾಟಕ ತುಳು ಅಕಾಡಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕೇರಳ ತುಳು ಅಕಾಡಮಿ ಅಧ್ಯಕ್ಷ ಬಿ. ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಮಣಿಕಾಂತ ಸ್ವಾಮೀಜಿ, ಸುಬ್ಬಯ್ಯ ರೈ, ಧರ್ಮಪಾಲ ದೇವಾಡಿಗ, ವಸಂತ ಶೆಟ್ಟಿ ಬೆಳ್ಳಾರೆ, ಎ.ಸಿ ಭಂಡಾರಿ, ತೋನ್ಸೆ ಜಯಕೃಷ್ಣ ಶೆಟ್ಟಿ, ಶಶಿಧರ ಶೆಟ್ಟಿ, ಫ್ರಾಂಕ್ ಫೆರ್ನಾ೦ಡೀಸ್, ರಾಜ್ ಕುಮಾರ್ ಚಂದ್ರಹಾಸ ರೈ, ಶಮೀನಾ ಆಳ್ವಾ, ರಾಜೇಶ್ ಆಳ್ವ, ಉಷಾ ಹೆಗ್ಡೆ, ಸುಮತಿ ಶೆಟ್ಟಿ, ಎ. ಶ್ರೀನಾಥ್, ಶ್ಯಾಮ್ ಪ್ರಸಾದ್, ರಾಜೇಂದ್ರ ರೈ, ಸುಬ್ರಾಯ ಅಡೂರು ಮೊದಲಾದವರು ಉಪಸ್ಥಿತರಿದ್ದರು.

ಕಣ್ಣೂರಿನ ಡಾ. ಶ್ರೀಧರನ್ ರವರ ತುಳು ಭಾಷೆ ಕೋಶ ನಿಘಂಟನ್ನು ಪಿ. ವಿ.ಕೆ  ಪನಯಾಲ್ ರವರಿಗೆ ನೀಡುವ ಮೂಲಕ ಆಸ್ಕರ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ವಸಂತ ಶೆಟ್ಟಿ ಬೆಳ್ಳಾರೆ, ಎಲ್. ವಿ ಅಮೀನ್, ಉಸ್ಮಾನ್ ಹಯಾತ್ ರವರನ್ನು ಸನ್ಮಾನಿಸಲಾಯಿತು. ತುಳು ಲಿಪಿಯ ಕ್ಯಾಲೆಂಡರ್ ನ್ನು ಸಚಿವ ಇ. ಚಂದ್ರಶೇಖರನ್ ಬಿಡುಗಡೆ ಗೊಳಿಸಿದರು. ಡಿ. ೯ ರಂದು ಆರಂಭಗೊಂಡ ವಿಶ್ವ ತುಳುವೆರೆ ಆಯಾನೊ ೧೩ ರಂದು ಕೊನೆಗೊಳ್ಳಲಿದೆ.

ಐದು ದಿನಗಳ ಕಾಲ ಐದು ವೇದಿಕೆಗಳಲ್ಲಿ ತುಳು ನಾಡಿನ ದೈವಾರಾಧನೆ ನಿನ್ನೆ -ಇಂದು -ನಾಳೆ, ಜನಮೈತ್ರಿ ಸಂಗಮ, ತುಳು ಸಾಹಿತ್ಯ ಸಮ್ಮೇಳನ, ತುಳುನಾಡು ಗೊಬ್ಬುಲು ಅಲ್ಲದೆ ರಾಷ್ಟ್ರೀಯ ಜಾನಪದ ಉತ್ಸವ, ಹಲವು ಗೋಷ್ಠಿಗಳು, ಜಾನಪದ ಸಾಂಸ್ಕೃತಿಕ ಪ್ರದರ್ಶನ, ಗುಡಿ ಕೈಗಾರಿಕಾ, ಪುಸ್ತಕ ಪ್ರದರ್ಶನ, ಜಾನಪದ ಕ್ರೀಡೆಗಳು ಆಯೋಜಿಸಲಾಗಿದೆ .

See also  ಚಲಿಸುತ್ತಿದ್ದ ಬಸ್ ಚಕ್ರಕ್ಕೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು