News Kannada
Monday, January 30 2023

ಕರಾವಳಿ

ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ

Photo Credit :

ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ

ಕಾಸರಗೋಡು: ಆದರ್ಶ ನಿಲ್ದಾಣವಾಗಿರುವ ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ ತಲೆದೋರಿದೆ. ಆವರಣವಿಡೀ  ವಾಹನಗಳಿಂದಲೇ ತುಂಬಿ ತುಳುಕುತ್ತಿದೆ. ಬೈಕ್, ಕಾರುಗಳಿಂದ ತುಂಬಿ ಹೋಗಿದ್ದು, ಸ್ಥಳದ ಕೊರತೆಯಿಂದ ಬಹುತೇಕ ವಾಹನಗಳು ಹೊರಗಡೆ ಪಾರ್ಕ್  ಮಾಡಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ಶುಲ್ಕ ಪಾವತಿಸಿ ವಾಹನಗಳನ್ನು ನಿಲುಗಡೆ ಗೊಳಿಸಲಾಗುತ್ತಿದೆ.
ದಿನಂಪ್ರತಿ ಸಾವಿರಾರು  ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತಲಪುತ್ತಾರೆ. ಆದರೆ ರೈಲು ನಿಲ್ದಾಣದಲ್ಲಿ ಮೂಲಭೂತ  ಸೌಲಭ್ಯ , ಪಾರ್ಕಿಂಗ್ ವ್ಯವಸ್ಥೆ  ಕೈಗೊಂಡಿಲ್ಲ. ರೈಲ್ವೆ ಇಲಾಖೆಯ ಆದರ್ಶ ನಿಲ್ದಾಣದದ ಪಟ್ಟಿಯಲ್ಲಿರುವ ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ  ಈ ಹಿಂದೆ  ಹಲವು ಬಾರಿ  ಪ್ರಯಾಣಿಕರು ಒತ್ತಾಯಿಸಿದ್ದರೂ ಇನ್ನೂ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಇದರ ಪರಿಣಾಮ ಪಾರ್ಕಿಂಗ್ ವ್ಯವಸ್ಥೆ ಗೊಂದಲಮಯವಾಗಿದೆ.

ವಾಹನಗಳು ಹೆಚ್ಚುತ್ತಿದ್ದರೂ ಪಾರ್ಕಿಂಗ್ ಗೆ ಸ್ಥಳ ಒದಗಿಸಲು ಅಧಿಕಾರಿಗಳು ಗಮನಹರಿಸಿಲ್ಲ.  ಇದರಿಂದ ಬಹುತೇಕ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತಲಪಿದರೂ ಹೊರಗಡೆ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಗೊಳಿಸಬೇಕಾದ ಅನಿವಾರ್ಯ ಸ್ಥಿತಿ ತಲೆದೋರಿದೆ.  ಸಾಮಾನ್ಯವಾಗಿ ಮಂಗಳೂರು , ತಿರುವನಂತಪುರ , ಮುಂಬೈ ಹಾಗೂ ಇನ್ನಿತರ ಕಡೆಗಳಿಗೆ ರೈಲುಗಳಲ್ಲಿ ಪ್ರಯಾಣಿಕರು  ಭದ್ರತೆ ದ್ರಷ್ಟಿ ಯಿಂದ ಶುಲ್ಕ ಪಾವತಿಸಿ ವಾಹನಗಳನ್ನು ನಿಲುಗಡೆ ಗೊಳಿಸುತ್ತಾರೆ. ಆದರೆ ಈಗ  ವಾಹನಗಳ ನಿಲುಗಡೆಗೆ ಸ್ಥಳದ ಕೊರತೆ ಇರುವುದು ಬಹುತೇಕ ಮಂದಿ ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

See also  ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಲು ನಿರಂತರ ಹೋರಾಟ ಅಗತ್ಯ: ಆಸ್ಕರ್ ಫೆರ್ನಾಂಡಿಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು