ಕಾಸರಗೋಡು: ಬೋವಿಕ್ಕಾನದಲ್ಲಿ ಪೊವ್ವಲ್ ನ ಅಬ್ದುಲ್ ಖಾದರ್ ಎಂಬಾತನ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಎಲ್ಲಾ ಆರೋಪಿಗಳನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಪ್ರಮುಖ ಆರೋಪಿ ಬೋವಿಕ್ಕಾನ ದ ಕಲಾಂ ಮುಹಮ್ಮದ್ ( 47), ಮುಳಿಯಾರು ಬಾಲನಡ್ಕದ ಮುಹಮ್ಮದ್ ಸಾಲಿ (25), ಬಾವಿಕ್ಕರೆಯ ಫಾರೂಕ್ ( 30) , ಅಶ್ರಫ್ ( 28) , ಹಸನ್ ಝುನೈಫ್ ( 30) ಎಂದು ಗುರುತಿಸಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿ ನಝೀರ್ ನನ್ನು ಕೆಲ ದಿನಗಳ ಹಿಂದೆ ಬಂಧಿಸಲಾಗಿತ್ತು.
ಆರೋಪಿಗಳು ಪರಾರಿಯಾಗಲು ಬಳಸಿದ್ದ ಕಾರು ಮತ್ತು ಒಂದು ಬೈಕ ನ್ನು ಆದೂರು ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣದ ಐದನೇ ಆರೋಪಿ ಬೋವಿಕ್ಕಾನದ ಫಾರೂಕ್ ನ ಕಾರು ಮತ್ತು ನಾಲ್ಕನೇ ಆರೋಪಿ ಅಶ್ರಫ್ ನ ಬೈಕ್ ನ್ನು ವಶಪಡಿಸಿಕೊಂಡಿದ್ದು, ಇನ್ನೊಂದು ಆಟೋ ವನ್ನು ವಶಪಡಿಸಿಕೊಳ್ಳಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ಖಾದರ್ ನನ್ನು ಕೊಲೆಗೈದ ಬಳಿಕ ಆಟೋ ಮೂಲಕ ಸ್ವಲ್ಪ ದೂರ ತನಕ ತೆರಳಿದ್ದ ನಾಸಿರ್ ಅಲ್ಲಿಂದ ಬೈಕ್ ಮೂಲಕ ನೆಲ್ಲಿಕಟ್ಟೆಗೆ ತಲಪಿ ವಸ್ತ್ರ ಬದಲಾಯಿಸಿ ಕಾರು ಮೂಲಕ ವಿಟ್ಲಕ್ಕೆ ಪರಾರಿಯಾಗಿದ್ದನು. ರಕ್ತದ ಕಲೆಗಳಿದ್ದ ವಸ್ತ್ರಗಳನ್ನು ಬದಿಯಡ್ಕ ಸಮೀಪದ ನಿರ್ಜನ ಪ್ರದೇಶದ ಪೊದೆಯೊಂದರಲ್ಲಿ ಪತ್ತೆ ಹಚ್ಚಲಾಗಿತ್ತು. ಡಿ. ಒಂದರಂದು ಬೋವಿಕ್ಕಾನ ಪೇಟೆಯಲ್ಲಿ ಅಬ್ದುಲ್ ಖಾದರ್ ನನ್ನು ಇರಿದು ಕೊಲೆಗೈಯ್ಯಲಾಗಿತ್ತು. ಪುಟ್ಬಾಲ್ ಪಂದ್ಯಾಟಕ್ಕೆ ಸಂಬಂಧಪಟ್ಟಂತೆ ಎರಡು ಕ್ಲಬ್ ತಂಡಗಳ ನಡುವಿನ ಘರ್ಷಣೆಯು ಕೊಲೆಗೆ ಕಾರಣವಾಗಿತ್ತು.