ಕಾಸರಗೋಡು: ಕಾಸರಗೋಡು ಕ್ರಿಶ್ಚಿಯನ್ ಫೆಲೋಶಿಫ್ ವತಿಯಿಂದ ಕ್ರಿಸ್ ಮಸ್ ಫೆಸ್ಟ್ ಆಚರಿಸಲಾಯಿತು . ಕಾಸರಗೋಡು ಪುರಭವನದಲ್ಲಿ ನಡೆದ ಸಮಾರಂಭವನ್ನು ಕೇರಳ ಕಂದಾಯ ಸಚಿವ ಇ . ಚಂದ್ರಶೇಖರನ್ ಉದ್ಘಾಟಿಸಿದರು.
ಶಾಂತಿ ಸಂದೇಶದೊಂದಿಗೆ ನಾವು ಮುನ್ನೆಡೆಯಬೇಕು, ಯೇಸು ಕ್ರಿಸ್ತರ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಬೇಕು, ಪರಸ್ಪರ ಸ್ನೇಹದಿಂದ ಬದುಕಬೇಕು ಎಂದು ಸಚಿವರು ಹೇಳಿದರು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡೆನ್ನಿಸ್ ಮೊರಾಸ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಬೇಳ ಶೋಕ ಮಾತಾ ಪುಣ್ಯಕ್ಷೇತ್ರದ ಧರ್ಮಗುರು ಮತ್ತು ಕಾಸರಗೋಡು ವಲಯ ವಿಕಾರ್ ವಾರ್ ವಂದನೀಯ ವಿನ್ಸೆಂಟ್ ಡಿಸೋಜ, ಕಾಸರಗೋಡು ಸೈ೦ಟ್ ಜೋಸೆಫ್ ಚರ್ಚ್ ನ ಧರ್ಮಗುರು ವಂದನೀಯ ಎ .ಮಾಣಿ ಮೇಲ್ ವೆಟ್ಟ೦, ತಲಪಾಡಿ ಮರಿಯಾಶ್ರಮ್ ಚರ್ಚ್ ಧರ್ಮಗುರು ನೆಲ್ಸನ್ ಒಲಿವರ,ಕಾಸರಗೋಡು ಸಿರಿಯಾನ್ ಆರ್ತೋಡಕ್ಸ್ ಚರ್ಚ್ ಧರ್ಮಗುರು ರೆವರೆಂಡ್ ಟಿ.ಎಸ್ ಮಥಾಯಿ, ಮಾರ್ತೋಮ ಕಾಲೇಜ್ ಮೆನೇಜರ್ ರೆವರೆಂಡ್ ಎ.ಜಿ ಮ್ಯಾತ್ಯು, ಸಿ ಎಸ್ ಐ ಎಕ್ಸಿಕ್ಯೂಟಿವ್ ಸದಸ್ಯ ವಿನ್ಸೆಂಟ್ ಪಾಲನಾ , ಲೀನಾ ರೊಡ್ರಿಗಸ್, ಸಿಸ್ಟರ್ ಲಿಲ್ಲಿ ಮರಿಯಾ ಮೊದಲಾದವರು ಉಪಸ್ಥಿತರಿದ್ದು ಕ್ರಿಸ್ ಮಸ್ ಸಂದೇಶ ನೀಡಿದರು.
ಬಳಿಕ ವಿವಿಧ ಚರ್ಚ್ ಗಳ ತಂಡಗಳಿಂದ ದೇವರು ನಮ್ಮ ಜೊತೆಯಲ್ಲಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.