News Kannada
Monday, December 05 2022

ಕರಾವಳಿ

ಯಕ್ಷಗಾನ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು: ತಾರಾನಾಥ ವರ್ಕಾಡಿ

Photo Credit :

ಯಕ್ಷಗಾನ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು: ತಾರಾನಾಥ ವರ್ಕಾಡಿ

ಸುಳ್ಯ: ನಮ್ಮ ಪೌರಾಣಿಕ ಕಾವ್ಯಗಳನ್ನು ರಂಗಪ್ರಯೋಗಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಯಕ್ಷಗಾನಕ್ಕೆ ತನ್ನದೇ ಆದ ಪ್ರಸಂಗ ಸಾಹಿತ್ಯವೂ ಇದೆ ಮತ್ತು ಅರ್ಥಗಾರಿಕೆಯ ಮೂಲಕ ಪ್ರಕಟವಾಗುವ ಆಶು ಸಾಹಿತ್ಯವೂ ಇದೆ. ಯಕ್ಷಗಾನದ ಕವಿಗಳು ಕಥೆಗಾಗಿ ಕಾವ್ಯಗಳನ್ನೇ ಆಧರಿಸಿದ್ದರೂ ಪ್ರಸಂಗ ಸಾಹಿತ್ಯದ ರಚನೆಯಲ್ಲಿ ಸೃಜನಶೀಲ ಕವಿತ್ವವನ್ನು ಹೊಂದಿದ್ದರು. ಹಾಗಾಗಿ ಯಕ್ಷಗಾನ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಗಳು ಆಗಬೇಕು ಎಂದು ಯಕ್ಷಗಾನ ಕಲಾವಿದ ಹಾಗೂ ಬಲ್ಲಿರೇನಯ್ಯ ಯಕ್ಷಗಾನ ಪತ್ರಿಕೆಯ ಸಂಪಾದಕ ತಾರಾನಾಥ ವರ್ಕಾಡಿ ಹೇಳಿದರು.

ಅವರು ಸುಳ್ಯದ ಸ್ನೇಹ ಶಾಲೆಯಲ್ಲಿ ಜರಗಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಾಯೋಜಿತವಾದ ‘ಕನ್ನಡ ಚಿಂತನ’ ಮಾಲಿಕೆಯಲ್ಲಿ ಯಕ್ಷಗಾನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಶಿಷ್ಟ ಸಾಹಿತ್ಯ ಲೋಕದ ಸಾಹಿತಿಗಳು ಯಕ್ಷಗಾನ ಸಾಹಿತ್ಯವನ್ನು ಅವಗಣಿಸುತ್ತಲೇ ಬಂದಿದ್ದಾರೆ. ಆದರೆ ಪಾರ್ಥಿಸುಬ್ಬನ ರಾಮಾಯಣದ ಪ್ರಸಂಗಗಳಲ್ಲಿ ದೇಸೀ ಬದುಕಿನ ಸೊಗಡನ್ನು ವಿವರಿಸುವ ಪದ್ಯಗಳಿವೆ. ರಾಮಾಶ್ವಮೇಧದಂತಹ ಗದ್ಯ ಕೃತಿಯನ್ನು ರಚಿಸಿದರೂ ಮುದ್ದಣನು ತನ್ನ ರತ್ನಾವತಿ ಕಲ್ಯಾಣ ಮತ್ತು ಕುಮಾರ ಸಂಭವ ಪ್ರಸಂಗಗಳಲ್ಲಿ ಶಬ್ದಗಳೊಂದಿಗೆ ನಡೆಸಿದ ಆಟ ವಿಶಿಷ್ಟವಾದುದು. ಅಂತೆಯೇ ಪ್ರತಿಯೊಬ್ಬ ಪ್ರಸಂಗಕರ್ತನೂ ತನ್ನ ಕಾವ್ಯ ರಚನೆಯಲ್ಲಿ ಉಪಮೆಗಳು, ಗಾದೆ ಮಾತುಗಳು, ರೂಪಕಗಳು ಮುಂತಾದ ಕಾವ್ಯತ್ಮಕ ಅಂಶಗಳನ್ನು ಬಳಸಿದ್ದಾರೆ. ಯಕ್ಷಗಾನದ ಭಾಗವತರುಗಳೂ ಸಾಹಿತ್ಯ ರಚನೆಯಲ್ಲಿ ನಿಷ್ಣಾತರಾಗಿದ್ದರು. ಇನ್ನು ಅರ್ಥಗಾರಿಕೆ ಎಂಬುದು ಶುದ್ಧ ಕನ್ನಡದ ಆಶುಸಾಹಿತ್ಯ ಸೃಷ್ಟಿಗೆ ನಿಚ್ಚಳ ಉದಾಹರಣೆ ಎಂದರು.
 
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಪ್ರಾಧಿಕಾರದ ಸದಸ್ಯ ಸಿ.ಎಫ್. ನಾಯ್ಕ್ ಮಾತನಾಡಿ ಕನ್ನಡ ಚಿಂತನ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿ ಕನ್ನಡ ಪ್ರಾಧಿಕಾರದ ಕಡೆಯಿಂದ ಕನ್ನಡಕ್ಕೆ ಪ್ರೋತ್ಸಾಹದಾಯಕವಾಗಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಸ್ನೇಹ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೀರ ದಾಮ್ಲೆ ವಂದಿಸಿದರು.

ಬಳಿಕ ಕೊಂಡದಕುಳಿ ರಾಮಚಂದ್ರ ಹೆಗ್ಡೆಯವರ ಕುಂಭಾಶಿ ಪೂರ್ಣಚಂದ್ರ ಮೇಳದವರಿಂದ ಸತ್ಯಹರಿಶ್ಚಂದ್ರ ಯಕ್ಷಗಾನ ಪ್ರದರ್ಶನ ನಡೆಯಿತು.

See also  ಕಂಪ್ಯೂಟರ್ ಕಳವು ಪ್ರಕರಣ: ಓರ್ವನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು