ಕಾರ್ಕಳ: ಕಾರ್ಕಳ ತಾಲೂಕು ಗ್ರಾಮಾಂತರ ಪೋಲಿಸ್ ಠಾಣೆಯ ವತಿಯಿಂದ ಪ್ರಕೃತಿ ಸಮೂಹ ಸಂಸ್ಥೆಯು ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳ ತಾಲ್ಲೂಕು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ಶ್ರೀಮಾನ್ ರಫೀಕ್ ಅವರು ಆಗಮಿಸಿ, ಅಪರಾಧ ಬಗ್ಗೆ ಎಚ್ಚರಿಕೆಯ ಕರೆಗಳು, ವಿದ್ಯಾರ್ಥಿಗಳು ಮತ್ತು ಪೋಲಿಸ್ ಅಧಿಕಾರಿಗಳ ನಡುವೆ ಸ್ನೇಹ ಸಂಬಂಧ ಹೊಂದಿರಬೇಕು ಎಂಬುವುದರ ಕುರಿತು ವಿದ್ಯಾರ್ಥಿಗಳಿಗೆ ಸ್ವ-ವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಎಸ್. ರಾಘವೇಂದ್ರ ಶೆಣೈ ಹಾಗೂ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ಆಕಾಶ್ ಜವಳಿಯವರು ಉಪಸ್ಥಿತರಿದ್ದರು. ಸವಿತಾ ವಿ ಭಟ್ ಅತಿಥಿಗಳನ್ನು ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.