ಮೂಡುಬಿದಿರೆ: ಸದಾ ಒತ್ತಡ ಮತ್ತು ವಿಶ್ರಾಂತಿ ರಹಿತ ಆಧುನಿಕ ಜೀವನ ಕ್ರಮದಿಂದಾಗಿ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ದೇಹ ಮತ್ತು ಮನಸ್ಸು ಸಮತೋಲನ ಕಳೆದುಕೊಂಡು ಜೀವನ ಭಾರವಾಗುವ ಸಂದರ್ಭ ಎದುರಾಗುತ್ತಿದೆ. ದೇಹಕ್ಕೆ ನಿಯಮಿತ ವ್ಯಾಯಾಮ, ಅಂಗಾಂಗಗಳಿಗೆ ಚೈತನ್ಯ, ಶರೀರದ ಕೋಷ್ಠಾಂಗಗಳಿಗೆ ಉತ್ತೇಜನ ಮತ್ತು ಶರೀರದ ವಿಷಾಕ್ತತೆಯನ್ನು ನೀಗಿಸಲು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಾಯಕಲ್ಪ ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಹಮ್ಮಿಕೊಂಡಿದೆ.
ಆ.9ರಂದು ಚಾಲನೆ:
ಜನವರಿ 9ರಂದು ಬೆಳಿಗ್ಗೆ 9 ಗಂಟೆಗೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದ್ದು, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಕೆ.ಆಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ, ಎಂ. ಮೋಹನ್ ಆಳ್ವ ಟ್ರಸ್ಟಿ ವೀವೆಕ್ ಆಳ್ವ ಉಪಸ್ಥಿತರಿರುವರು.
ಸೌಲಭ್ಯ:
ಕಾಯಕಲ್ಪವು ಸುಖಸಾಧನ (ವಿಶ್ರಾಮ ಚಿಕಿತ್ಸೆ), ರಸಾಯನ ಸಾಧನ (ನವ ಚೈತನ್ಯ/ ಪುನರುಜ್ಜೀವನ ಚಿಕಿತ್ಸೆ) ಸ್ವಸ್ಥ ಸಾಧನ ಚಿಕಿತ್ಸೆ (ಆರೋಗ್ಯ ರಕ್ಷಣೆ), ಶೋಧನ ಕಲ್ಪ (ದೇಹ ಸಂಶುದ್ಧಿ ಚಿಕಿತ್ಸೆ) ಹಾಗೂ ಸೌಂದರ್ಯ ಸಾಧನ (ಸೌಂದರ್ಯ ಚಿಕಿತ್ಸೆ) ಎಂಬ ಪ್ರತ್ಯೇಕ ವಿಭಾಗಗಳಲ್ಲಿ ಕಾರ್ಯ ನಿರ್ವವಹಿಸಲಿದ್ದು, ತಜ್ಞ ಆಯುರ್ವೇದ ವೈದ್ಯರು ಚಿಕಿತ್ಸೆ ಮತ್ತು ಸಲಹೆಗೆ ಲಭ್ಯರಿರುತ್ತಾರೆ. ಈ ಎಲ್ಲಾ ಆಯುರ್ವೇದ ಚಿಕಿತ್ಸೆಗೆ ಸಂಬಂದಿಸಿದಂತೆ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯ (ಅಉಊಖ) ವಿಮಾಸೌಲಭ್ಯವಿದೆ. ಇತರರಿಗೆ ಆಳ್ವಾಸ್ ಆರೋಗ್ಯ ಸಿರಿ ಹೆಲ್ತ್ ಕಾರ್ಡ್ ಹಾಗೂ ಆಯುಷ್ ಆರೋಗ್ಯ ವಿಮೆಯ ವಿಶೇಷ ಸೌಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ ವಿನಯಚಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಡಾ.ಬಿ ವಿನಯಚಂದ್ರ ಶೆಟ್ಟಿ (9611497446) ,ಡಾ.ಅನಿಲ್ ರೈ (9448348636) ಹಾಗೂ ಡಾ.ಮಹಾಬಲೇಶ್ವರ್ (9886620260) ಸಂಪರ್ಕಿಸಬಹುದಾಗಿದೆ.