ಕಾಸರಗೋಡು: ಕಾರು ಡಿಕ್ಕಿ ಹೊಡೆದು ಮೂವರು ಪಾದಚಾರಿಗಳು ಗಾಯಗೊಂಡ ಘಟನೆ ಬದಿಯಡ್ಕ ಮಾವಿನಕಟ್ಟೆಯಲ್ಲಿ ನಡೆದಿದೆ.
ಮಾವಿನಕಟ್ಟೆ ಸಫಿಯಾ (೧೫), ನಜಿಯ (೧೩), ಪಳ್ಳತ್ತಮೂಲೆಯ ರಹೀದ (೧೪) ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರಗಾಯಗೊಂಡ ಸಫಿಯಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಜಿಯಾ, ರಹೀದ ಎಂಬವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಆದಿತ್ಯವಾರ ಬೆಳಿಗ್ಗೆ
ಪಿಲಾಂಕಟ್ಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿ ಮರಳುತ್ತಿದ್ದಾಗ ಅತೀ ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತಕ್ಕೀಡಾದ ಕಾರನ್ನು ಬಿಟ್ಟು ಅದರಲ್ಲಿದ್ದವರು ಕೂಡಲೇ ಪರಾರಿಯಾಗಿದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.