ಕಾಸರಗೋಡು: ನೋಟು ಅಮಾನ್ಯದಿಂದ ಜನರ ಸಮಸ್ಯೆಯನ್ನು ಪರಿಹಾರ ಮಾಡದಿರುವುದನ್ನು ಪ್ರತಿಭಟಿಸಿ ಯುವ ಸಂಘಟನೆಯಾದ ಎನ್ ವೈ ಎಲ್ ಕಾಸರಗೋಡು ಪ್ರಧಾನ ಅಂಚೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿತು.
ರಾಜ್ಯ ಅಧ್ಯಕ್ಷ ಅಜಿತ್ ಕುಮಾರ್ ಅಜಾದ್ ಉದ್ಘಾಟಿಸಿದರು. ನರೇಂದ್ರ ಮೋದಿ ನೀಡಿದ ಭರವಸೆಯನ್ನು ಈಡೇರಿಸದೆ ಜನರನ್ನು ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು. ಐಎನ್ ಎಲ್ ಪ್ರಧಾನ ಕಾರ್ಯದರ್ಶಿ ಅಝೀಜ್ ಕಡಪ್ಪುರ , ಎನ್ ವೈ ಎಲ್ ಜಿಲ್ಲಾಧ್ಯಕ್ಷ ರಹೀಮ್ ಬೆಂಡಿಚ್ಚಾಲ್, ಝುಬೈರ್ ಪಡುಪ್ಪು, ಯೂಸಫ್ ಉಪ್ಪಳ, ಉಮ್ಮರ್ ತಳಂಗರೆ , ಅಶ್ರಫ್ ತುರ್ತಿ ಮೊದಲಾದವರು ಮಾತನಾಡಿದರು. ಇದಕ್ಕೆ ಮೊದಲು ಹೊಸ ಬಸ್ಸು ನಿಲ್ದಾಣದಿಂದ ಹೊರಟ ಮೆರವಣಿಗೆ ನಗರ ಪ್ರದಕ್ಷಿಣೆ ಬಂದು ಬಳಿಕ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದರು.