News Kannada
Monday, December 05 2022

ಕರಾವಳಿ

ಬಂಟ್ವಾಳದಲ್ಲಿ ತಾಲೂಕು ಮಟ್ಟದ ಕೃಷಿ ಉತ್ಸವ

Photo Credit :

ಬಂಟ್ವಾಳದಲ್ಲಿ ತಾಲೂಕು ಮಟ್ಟದ ಕೃಷಿ ಉತ್ಸವ

ಬಂಟ್ವಾಳ: ಭೂಶಕ್ತಿ, ಜಲಶಕ್ತಿ, ಜನಶಕ್ತಿ ಹಾಗೂ ಆಧುನಿಕ ಯಾಂತ್ರಿಕ ಶಕ್ತಿಯ ಸಮರ್ಪಕ ಬಳಕೆಯಿಂದ ಮಾತ್ರ ಕೃಷಿವಲಯಕ್ಕೆ ಪುನರ್ಶ್ಚೇತನ ನೀಡಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಉತ್ಸವ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡಿನ ಗಾಣದಪಡ್ಪು ಮೈದಾನದಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ಬಂಟ್ವಾಳ ತಾಲೂಕು ಮಟ್ಟದ “ಕೃಷಿ ಉತ್ಸವ-2016-17″ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹನೆ, ಕಠಿಣ ಪರಿಶ್ರಮವನ್ನು ಕೃಷಿಕರು ಮೈಗೂಡಿಸಿಕೊಳ್ಳಬೇಕು ಎಂದ ಅವರು ದೂರದೃಷ್ಟಿಯ ಮನೋಭಾವದೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದರು.

ಕೃಷಿಯ ಅನಿಶ್ಚಿತತೆಯ ನಡುವೆ ಯುವಜನರ ಪೇಟೆ ಸಹವಾಸ ಕೃಷಿ ವಲಯದ ಆತಂಕಕ್ಕೆ ಒಂದು ಕಾರಣ ಎಂದ ಅವರು ಆದಾಯಕ್ಕಿಂತಲೂ ಖರ್ಚು ಅಧಿಕವಾಗುತ್ತಿರುವುದು ಕೂಡಾ ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಮರ್ಶಿಸಿದರು. ರಾಜ್ಯದ 90 ಶೇಕಡ ತಾಲೂಕುಗಳಲ್ಲಿ ಮಳೆಯಿಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದೆ ಎಂದ ಅವರು ರೈತರು ಸರಕಾರದ ಯೋಜನೆಗಳನ್ನು ಅಧಿಕಾರಯುಕ್ತವಾಗಿ ಪಡೆಯಲು ಚಿಂತಿಸಬೇಕು ಎಂದು ಸಲಹೆ ನೀಡಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ನಿರಾಢಂಬರ ಮತ್ತು ಸರಳ ಜೀವನ ಶೈಲಿಯನ್ನು ಕೃಷಿಬದುಕು ಕಲಿಸಿಕೊಡುತ್ತದೆ. ಕೃಷಿ ಉತ್ಸವ ಕೃಷಿಕರ ಉತ್ಸಾಹವನ್ನು ಹೆಚ್ಚಿಸಲಿ ಎಂದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸರಕಾರ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಬೆಲೆ ಆಯೋಗವನ್ನು ರಚಿಸಿದೆ. ಇದು ಕೃಷಿಕರು ಹಾಗೂ ಮಾರುಕಟ್ಟೆಯ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕೃಷಿಯಲ್ಲಿ ಮೌಲ್ಯವರ್ಧನವಾಗುವ ನಿಟ್ಟಿನಲ್ಲಿ ರೈತ ಆಲೋಚಿಸಬೇಕು. ಸರಕಾರ ಯಂತ್ರಾಧಾರ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಕಾಲ ಚಕ್ರದಂತೆ ರೈತರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಬದುಕಬೇಕು ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಸತೀಶ್ಚಂದ್ರ, ಉದ್ಯಮಿ ಅಬ್ದುಲ್ ಅಝೀಝ್ ತುಂಬೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ವೇದಿಕೆಯಲ್ಲಿ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ರುಕ್ಮಯ ಪೂಜಾರಿ, ಎ.ಸಿ.ಭಂಡಾರಿ, ಕಿರಣ್ ಹೆಗ್ಡೆ, ನಾರಾಯಣ ಭಟ್ ಕೆಯ್ಯೂರು, ಹಾಲಿ ಅಧ್ಯಕ್ಷ ಪ್ರಕಾಶ್ ಕಾರಂತ, ಬಂಟ್ವಾಳ ತಾಲೂಕು ಪ್ರ.ಬಂ.ಸ್ವ.ಸ.ಸಂ.ಕೇ.ಒ. ಅಧ್ಯಕ್ಷ ಸದಾನಂದ ಗೌಡ, ಯೋಜನೆಯ ನಿದರ್ೇಶಕರುಗಳಾದ ಮಹವೀರ ಅಜ್ರಿ, ಚಂದ್ರಶೇಖರ ನೆಲ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

See also  ಪಯಸ್ವಿನಿಯ ಮೀನುಗಳಿಗೆ ನೈವೇದ್ಯ ಅರ್ಪಿಸುವ ಕಾರ್ಯ ಆರಂಭ

ಕೃಷಿ ಉತ್ಸವ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿಸೋಜಾ ಸ್ವಾಗತಿಸಿದರು. ತಾಲೂಕು ಯೋಜನಾ ಅಧಿಕಾರಿ ಸುನಿತಾ ನಾಯ್ಕ ವರದಿ ವಾಚಿಸಿದರು. ಪತ್ರಕರ್ತ ಗೋಪಾಲ್ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಜಯಂತಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜೀವಜಲ ಸಂರಕ್ಷಣೆ, ಭತ್ತ ಬೇಸಾಯದಲ್ಲಿ ಯಾಂತ್ರಿಕತೆ ಎಂಬ ವಿಚಾರದ ಕುರಿತು ಗೋಷ್ಠಿಗಳು ನಡೆದವು.

ಮೊಟಕ್ಗೊಂಡ ಮೆರವಣಿಗೆ
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಾಸ್ತಾನದ ಬಳಿಯಿಂದ ಕೃಷಿ ಉತ್ಸವದ ಮೆರವಣಿಗೆಯನ್ನು ಸಭಾಂಗಣದ ವರೆಗೆ ಸಂಘಟಕರು ಆಯೋಜಿಸಿದ್ದರೂ ಕೊನೆಗಳಿಗೆಯಲ್ಲಿ ಮೆರವಣಿಗೆಯನ್ನು ಮೊಟಕ್ಗೊಳಿಸಿ ಸಭಾಂಗಣದ ಪಕ್ಕದಲ್ಲೇ ಇರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿಯಿಂದ ಮೆರವಣಿಗೆ ಆರಂಭಿಸಲಾಯಿತು.
ವಿವಿಧ ವಾದ್ಯಗೋಷ್ಠಿ, ಬೊಂಬೆಕುಣಿತ, ಮೆರವಣಿಗೆಗೆ ಮೆರಗು ನೀಡಿತು.

ಕೃಷಿ ಉತ್ಸವದ ಸುತ್ತ-ಮುತ್ತ್ತಾ
ಕೃಷಿ ಉತ್ಸವದಲ್ಲಿ ತುಳುನಾಡಿನ ಸಂಸ್ಕೃತಿಯ ಪ್ರದರ್ಶನ ಜನಮನ ಸೆಳೆಯಿತು. ಪಂಚವಟಿ ಹೆಸರಿನ ಗುಡಿಸಲು, ಅದರ ಎದುರು ಸಾಕು ನಾಯಿ, ಕೈಯಲ್ಲೊಂದು ಕೋಲು ಹಿಡಿದು ವೀಳ್ಯದೆಲೆ ಜಗಿಯುತ್ತಿರುವ ಅಜ್ಜಿ, ಬಾವಿ ಕಟ್ಟೆ, ದನದ ಕೊಟ್ಟಿಗೆ, ಅದರಲ್ಲಿ ಸಾಕು ಗೋವುಗಳ ಪ್ರದರ್ಶನವನ್ನು ಜನರ ಗಮನ ಸೆಳೆದಿದ್ದು ಜನರು ಸಾಲುಗಟ್ಟಿನಿಂತು ವೀಕ್ಷಿಸಿದರು.
ಪಕ್ಕದಲ್ಲಿ ಏತ ನೀರಾವರಿಯ ಅಣಕು ಪ್ರದರ್ಶನ, ಕೇಪು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಈಶ್ವರ ಮೂರ್ತಿ, ವಿವಿಧ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಮಾರಾಟ, ವಿವಿಧ ತಳಿಯ ಜಾನುವಾರುಗಳ ಪ್ರದರ್ಶನ, ವಿವಿಧ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ವಿಶೇಷ ಗಮನ ಸೆಳೆಯಿತು. ನಿರೀಕ್ಷೆಗೂ ಮೀರಿ ಜನರು ಈ ಕೃಷಿ ಉತ್ಸವದಲ್ಲಿ ಭಾಗವಹಿಸಿದರು.  ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಳೈಸಿದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು