News Kannada
Friday, December 09 2022

ಕರಾವಳಿ

ಶೌಚಾಲಯದಲ್ಲಿ ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನ: ಓರ್ವನ ಬಂಧನ

Photo Credit :

ಶೌಚಾಲಯದಲ್ಲಿ ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನ: ಓರ್ವನ ಬಂಧನ

ಕಾಸರಗೋಡು: ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಶೌಚಾಲಯದಲ್ಲಿ ಮಾನಭಂಗಕ್ಕೆ ಯತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಯೋರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬದಿಯಡ್ಕ-ಮುಳ್ಳೇರಿಯಾ ರಸ್ತೆ ನಿವಾಸಿ ಸಿದ್ದಿಕ್ (೨೮) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಘಟನೆ ನಡೆದಿತ್ತು. ಬದಿಯಡ್ಕ ಸಮೀಪದ ಶಾಲೆಯ ವಿದ್ಯಾರ್ಥಿನಿಯನ್ನು ಶಾಲಾ ಆವರಣದೊಳಗೆ ನುಗ್ಗಿ ಈ ಕೃತ್ಯವೆಸಗಿದ್ದನು.

ಇದೇ ಶಾಲೆಯ ಶಿಕ್ಷಕರೋರ್ವರ ಪುತ್ರಿಯಾಗಿರುವ ಈಕೆ ಶಾಲೆ ಬಿಟ್ಟ ಬಳಿಕ ತಂದೆ ಜೊತೆ ತೆರಳಲೆಂದು ಹೊರಗಡೆ ನಿಂತಿದ್ದರು. ಶಾಲೆಯಲ್ಲಿ ಶಿಕ್ಷಕರಿಗೆ ಸಭೆ ನಡೆದುದರಿಂದ ಮನೆಗೆ ತೆರಳಲು ವಿಳಂಬವಾಗಿತ್ತು. ಉಳಿದ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರು.

ಈ ನಡುವೆ ಶಾಲಾ ಆವರಣಕ್ಕೆ ಬಂದ ಈತ ಬಲವಂತವಾಗಿ ವಿದ್ಯಾರ್ಥಿಯನ್ನು ಶೌಚಾಲಯಕ್ಕೆ ಎಳೆದೊಯ್ದು ಕಿರುಕುಳಕ್ಕೆತ್ನಿಸಿದ್ದು, ಬೊಬ್ಬೆ ಕೇಳಿ ಶಿಕ್ಷಕರು ಓಡಿ ಬಂದಾಗ ಈತ ಪರಾರಿಯಾಗಿದ್ದನು. ಬೆನ್ನಟ್ಟಿದ ಶಿಕ್ಷಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಯನ್ನು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗಲ್ಫ್ ಉದ್ಯೋಗಿಯಾಗಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಬಂದು ನೆಲೆಸಿದ್ದಾನೆ.

See also  ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ: ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು