ಮೂಡುಬಿದಿರೆ: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ನ ಎರಡನೇ ದಿನವಾದ ಶನಿವಾರದಂದು ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಮೊದಲ ಕಾರ್ಯಕ್ರಮವಾಗಿ ಟ್ರಿನಿಟಿ `ನಾದ ಮಾಧುರ್ಯ’ ಗಮನ ಸೆಳೆಯಿತು.
ಸಿತಾರ್ ನಲ್ಲಿ ಪುರ್ಬಯಾನ್ ಚಟರ್ಜಿ, ಯು.ರಾಜೇಶ್ ಅವರು ಮ್ಯಾಂಡೋಲಿನ್, ರಂಜಿತ್ ಬೇರಟ್, ಗುಲ್ರಾಜ್ ಸಿಂಗ್, ಮೋಹಿನಿ ಡೆ ಅವರು ಬೇಸ್ ಗಿಟಾರ್ ಹಾಗೂ ಭೂಷಣ್ ಪರ್ಚುರೆ ಅವರು “ನಾದ ಮಾಧುರ್ಯ”ಕ್ಕೆ ಸಾಥ್ ನೀಡುವ ಮೂಲಕ ಸೇರಿರುವ ಸಂಗೀತ ಕಲಾಸಕ್ತರ ಗಮನ ಸೆಳೆಯಿತು
ಉದ್ಯಮಿ ನಾರಾಯಣ ಪಿ.ಎಂ ದೀಪ ಪ್ರಜ್ವಲನಗೊಳಿಸುವ ಮೂಲಕ ಎರಡನೇ ದಿನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮತ್ತೋರ್ವ ಸಚ್ಚಿದಾನಂದ ಶೆಟ್ಟಿ, ಆಳ್ವಾಸ್ ವಿರಾಸತ್ ನ ರೂವಾರಿ ಡಾ.ಎಂ.ಮೋಹನ ಆಳ್ವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎರಡನೇ ಕಾರ್ಯಕ್ರಮವಾಗಿ ಬೆಂಗಳೂರಿನ 9 ವರ್ಷದ ಬಾಲ ಪ್ರತಿಭೆ ಮಾಸ್ಟರ್ ರಾಹುಲ್ ವೆಲ್ಲಾಲ್ ಅವರು ದೇವರನಾಮವನ್ನು ಹಾಡಿದರು. ಮೂರನೇ ಕಾರ್ಯಕ್ರಮವಾಗಿ ಭುವನೇಶ್ವರದ ಆರಾಧನಾ ಡ್ಯಾನ್ಸ್ ಅಕಾಡೆಮಿಯ 55 ಕಲಾವಿದರಿಂದ ಒಡಿಸ್ಸಿ-ಗೋಟಿಪುವಾ ನೃತ್ಯರೂಪಕ “ಅಂಗರಾಗ”ವನ್ನು ಪ್ರಸ್ತುತ ಪಡಿಸಿದರು. ನಂತರ ಯೋಗೇಶ್ ಮಾಳವಿಯಾ, ಉಜ್ಜಯಿನಿ ಮತ್ತು ಬಸವರಾಜ್ ಬಂಡಿವಾಡ್ ನಿದೇರ್ಶನದಲ್ಲಿ 80 ವಿದ್ಯಾರ್ಥಿ ಕಲಾವಿದರಿಂದ ಸಾಹಸಮಯ ರೋಪ್ ಮತ್ತು ಮಲ್ಲಕಂಬ, ಕಲ್ಕತ್ತಾದ ಅಶಿಂಬಂಧು ಭಟ್ಟಾಚಾರ್ಯ ನಿದೇರ್ಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಕಥಕ್ ನೃತ್ಯ ಆನಂದಮಂಗಳಂ ದೇಶ್ ಅನಾವರಣಗೊಂಡಿತು.
ಸೂಪರ್ ಸಿಂಗ್ ನಿದೇರ್ಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಮಣಿಪುರದ ಧೋಲ್ ಚಲೋಮ್ ಹಾಗೂ ಕೊಲಂಬೋದ ಜಯಂಪತಿ ಭಂಡಾರ ಅವರ ನಿದೇರ್ಶನದಲ್ಲಿ 60 ವಿದ್ಯಾರ್ಥಿ ಕಲಾವರದಿಂದ ಶ್ರೀಲಂಕಾದ ನೃತ್ಯ ವೈಭವ “ನೃತ್ಯೋತ್ಸವ” ಸಾದರಗೊಂಡಿತ್ತು. ಈ ವಿದ್ಯಾರ್ಥಿ ಕಲಾವಿದರೆಲ್ಲಾ ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಾಗಿದ್ದರು.
ಮೇಘನಾ ರಿಷ್ಮಾ “ನಾದ ಮಾಧುರ್ಯ”ವನ್ನು ಆಳ್ವಾಸ್ನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಪ್ರೇಮ್ಸಾಗರ್ ದೋಲ್ ಚಲೋಮ್ ಮತ್ತು ಶ್ರೀಲಂಕಾದ ನೃತ್ಯ ವೈಭವವನ್ನು, ಲಾವಣ್ಯ ವಾಸುದೇವ್ ಶಹಪೂರ್ ಅವರು ದೇವರನಾಮ, ಅಮಿತ ಸೆಬೆಸ್ಟಿಯನ್ ಮತ್ತು ಜ್ಯೋತಿ ಅವರು ಗೋಟಿಪೂವಾ ಕಾರ್ಯಕ್ರಮವನ್ನು ನಿರೂಪಿಸಿದರು.