ಕಾರ್ಕಳ: ಕರಿಯಕಲ್ಲಿನಿಂದ ಅವೃತ್ತಗೊಂಡಿರುವ ನಾಡ ಕಾರ್ಕಳ. ಪುಣ್ಯ ಕ್ಷೇತ್ರಗಳ ನೆಲೆಬೀಡು. ಜಾತ್ಯತೀತ ಮನೋಭಾವವನ್ನು ಎತ್ತಿ ಹಿಡಿದಿರುವಂತಹ ಪುಣ್ಯ ಭೂಮಿ. ಸನಾತನ, ಜೈನ, ಇಸ್ಲಾಂ, ಕ್ರೈಸ್ತ ಧರ್ಮಗಳ ಸಂಗಮ ಕ್ಷೇತ್ರ. ಇಂತಹ ಪುಣ್ಯಭೂಮಿಯಲ್ಲಿರುವ ಅತ್ತೂರು ಸಂತಲಾರೆನ್ಸ್ ಪವಾಡ ಪುಣ್ಯಕ್ಷೇತ್ರವು ವಿಶ್ವ ಮಾನ್ಯತೆ ಪಡೆದುಕೊಂಡು ಇದೀಗ ಮೈನರ್ ಬೆಸಿಲಿಕಾ(ಕಿರು ದೇವಾಲಯ) ಎಂದು ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ.
ಕ್ರೈಸ್ತಧರ್ಮದ ರೋಮನ್ ಕೆಥೋಲಿಕ್ ಮಹಾಗುರು ಪೋಪ್ ಫ್ರಾನ್ಸಿಸ್ ಅವರಿಂದ ಮೈನರ್ ಬೆಸಿಲಿಕಾ ಎಂಬ ಮಾನ್ಯತೆ ಪಡೆದ ಬಳಿಕ ಪ್ರಪ್ರಥಮ ಬಾರಿಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು ಹತ್ತೂರು ಜನರ ಗಮನ ಅತ್ತೂರು ಕಡೆಗೆ ಸೆಳೆದಿದೆ.
ಇತಿಹಾಸ
ರಾಜ್ಯದಲ್ಲಿರುವ ಎರಡನೇಯ ಮೈನರ್ ಬೆಸಿಲಿಕಾ ಎಂಬ ಖ್ಯಾತಿಗೆ ಪಡೆದಿರುವ ಈ ಪುಣ್ಯಕ್ಷೇತ್ರ ಇತಿಹಾಸ ಮಹತ್ವದಾಗಿದೆ. ಚಿಮ್ಮವ ಸಿಹಿ ನೀರಿನ ಒರತೆ ಅತ್ತೂರು ಪುಣ್ಯಕ್ಷೇತ್ರ ಸ್ಥಾಪನೆಗೆ ಪೀಠಿಕೆಯಾಗಿದೆ. ತನ್ಮೂಲಕ ದಕ್ಷಿಣ ಭಾರತದ ಕ್ರೈಸ್ತಾಲಯದಲ್ಲಿ ಇರುವಂತಹ ಏಕೈಕ ಪುಷ್ಕರಿಣಿ ಇದಾಗಿದೆ. ಕ್ರಿ.ಶ 1759ರ ನಂತರ ಲಿಖಿತ ದಾಖಲೆ ಲಭ್ಯವಾಗಿದೆ. ಫ್ರಾನ್ಸಿಸ್ ಸಾಲ್ವದೊರೆ ಲೋಬೋ 1759-1775ರ ತನಕ ಇದೇ ಪುಣ್ಯಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 1784ರಲ್ಲಿ ಟಿಪ್ಪುಸುಲ್ತಾನ ಕರಾವಳಿ ಕೈಸ್ತರನ್ನು ಬಂಧಿಸಿ ಶ್ರೀರಂಗ ಪಟ್ಟಣದಲ್ಲಿ ಬಂಧನದಲ್ಲಿಟ್ಟಿದ್ದ. 1799ರಲ್ಲಿ ಟಿಪ್ಪು ಸುಲ್ತಾನ ಮರಣ ನಂತರ ಬಂಧಮುಕ್ತಗೊಂಡ ಕ್ರೈಸ್ತರು ಅತ್ತೂರಿನಿಂದ ನಕ್ರೆಗೆ ಹೋಗುವ ದಾರಿಯಲ್ಲಿ ಮರಳಿ ಹುಲ್ಲಿನ ಚಾವಣಿಯ ಚರ್ಚ್ ಸ್ಥಾಪಿಸಿದರು.
ನಂಬಿಕೆ ಹೀಗಿದೆ!ಮುಳಿಹುಲ್ಲಿನ ಇಗರ್ಜಿ ಶಿಥಿಲಗೊಂಡಾಗ ಗೋವಾ ಮೂಲದ ಧರ್ಮಗುರುಗಳು ಕಾಷ್ಠಶಿಲ್ಪದ ಸಂತ ಲಾರೆನ್ಸ್ರ ವಿಗ್ರಹದೊಂದಿಗೆ ಹೊಸ ಪುಣ್ಯಕ್ಷೇತ್ರ ನಿರ್ಮಿಸಲು ಯೋಗ್ಯ ಸ್ಥಳ ಅರಸಿ ಹೊರಟಿದ್ದರು. ಪರ್ಪಲೆಗುಡ್ಡೆ ಇಳಿದು ವಿಗ್ರಹ ನೆಲದಲ್ಲಿ ಇಟ್ಟು ಸನ್ನಿಹದಲ್ಲಿ ಹರಿಯುತ್ತಿದ್ದ ನೀರಿನ ಒರತೆಯಿಂದ ಬಾಯಾರಿಕೆ ನೀಗಿಸಿಕೊಂಡರು. ಪಯಣ ಮುಂದುವರಿಸಲು ಬಯಸಿ ಹೊರಡಲು ಸಿದ್ಧವಾಗಿ ನೆಲದಲ್ಲಿ ಇಟ್ಟ ವಿಗ್ರಹವನ್ನು ಮೇಲಕ್ಕೇತ್ತಲು ಮುಂದಾದಾಗ ಕಿಂಚಿತ್ತು ಅಲುಗಡದೇ ಅವರಿಗೆ ಅಶ್ವರ್ಯ ಕಾದಿತು. ಸಂತ ಲಾರೆನ್ಸ್ ಅವರೇ ತಾವು ಇಲ್ಲಿಯೇ ತಂಗಲು ಬಯಸಿದ್ದಲ್ಲಿ ಅಲ್ಲಿಯೇ ಪುಣ್ಯಕ್ಷೇತ್ರ ನಿರ್ಮಿಸಲು ಮುಂದಾಗುತ್ತೇವೆ ಎಂದು ಶಪಥ ಮಾಡಿಕೊಂಡರು. ಮುಂದೆ ಇದೇ ಸ್ಥಳದಲ್ಲಿ 1839ರಲ್ಲಿ ಪುಣ್ಯಕ್ಷೇತ್ರ ನಿರ್ಮಿಸಲಾಯಿತ್ತೆಂಬ ಮಹತ್ವದ ವಿಚಾರ ತಿಳಿದುಬಂದಿದೆ.
ಅಸ್ವಸ್ಥರಿಗೆ ಆಶಾಕಿರಣ
ಕ್ರಿ.ಶ 275ರಲ್ಲಿ ರೋಮ್ ಚಕ್ರವರ್ತಿಯ ಧರ್ಮವಿರೋಧಿ ನೀತಿಯಿಂದ ಕ್ರೈಸ್ತ ಧರ್ಮಕ್ಕಾಗಿ ಹುತಾತ್ಮರಾದ ಸಂತಲಾರೆನ್ಸ್ ಹೆಸರಿನಲ್ಲಿ ಅತ್ತೂರು ಪ್ರಸಿದ್ಧವಾಗಿದೆ. ತನ್ನ ಜೀವಿತಾವಧಿಯಲ್ಲಿ ವಿಕಚೇತನ,ರೋಗ ರುಜೀತನದಲ್ಲಿ ಬಳಲುತ್ತಿರುವವರು, ಮಾನಸಿಕ ಅಸ್ಪಸ್ಥರ ಸೇವೆಗೈಯುತ್ತಿದ್ದರು. ಇಂದಿಗೂ ಅಸ್ವಸ್ಥರ, ವಿಕಲಚೇತನರ, ಮಾನಸಿಕ ನೊಂದವರ ಕಣ್ಣೋರೆಸುವ ಕಾರ್ಐ ಇದೇ ಪುಣ್ಯಕ್ಷೇತ್ರದಲ್ಲಿ ನಡೆಯುತ್ತಾಬಂದಿದೆ.
ಪವಿತ್ರ ಸ್ಮಾರಕ
ಕ್ರಿ.ಶ ಮೂರನೇ ಶತಮಾನದಲ್ಲಿ ಶತಮಾನದಲ್ಲಿ ಬಾಳಿ ಬದುಕಿದ ಸಂತಲಾರೆನ್ಸ್ ರ ಬಟ್ಟೆಯ ತುಂಡನ್ನು ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿರಿಸಲಾಗಿದೆ. ಕ್ರೈಸ್ತರು ಟಿಪ್ಪುವಿನ ಮರಣಾಂತರ ಬಂಧಮುಕ್ತರಾಗಿ ಶತಮಾನ ಪೊರೈಸಿದ ನೆನಪಿಗಾಗಿ 1900ರಲ್ಲಿ ಹೊಸ ಪುಣ್ಯ ಕ್ಷೇತ್ರ ನಿರ್ಮಿಸಲಾಗಿದೆ. ದ್ವಿಶತಮಾನೋತ್ಸವ ನೆನಪಿಗಾಗಿ ಕ್ರಿ.ಶ.2000ದಲ್ಲಿ ಪುಣ್ಯಕ್ಷೇತ್ರ ಜೀರ್ಣೋದ್ಧಾರ ಮಾಡಲಾಗಿದೆ.
ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
ಜನವರಿ 22 ಮುಂಜಾನೆ 7.30ಕ್ಕ ದಿವ್ಯ ಬಲಿಪೂಜೆ ಹಾಘೂ ಪರಮ ಪ್ರಸಾದ ಮೆರವಣಿಗೆ ಸಾಯಂಕಾಲ 3.00 ಮತ್ತು 5.00ಗಂಟೆಗೆ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ.
2.23 ಮುಂಜಾಣೆ 10.00 ಮತ್ತು ಸಾಯಂಕಾಲ 3.00 ವ್ಯಾದಿಷ್ಠರಿಗಾಗಿ ವಿಶೇಷ ಪ್ರಾರ್ಥನೆ. ಸಾಯಂಕಾಲ 6.00 ಗಂಟೆಗೆ ಕನ್ನಡದಲ್ಲಿ ದಿವ್ಯ ಬಲಿಪೂಜೆ. ಬಳ್ಳಾರಿ ಧರ್ಮಾಧ್ಯಕ್ಷರಿಂದ.
ಜ.24 ಸಾಯಂಕಾಲ 6.00 ಗಂಟಗೆ ಕನ್ನಡದಲ್ಲಿ ದಿವ್ಯ ಬಲಿಪೂಜೆ(ಮಲಬಾರ್) ಬೆಳ್ತಂಗಡಿ ಧರ್ಮಾಧ್ಯಕ್ಷರಿಂದ. ಬೆಳಿಗ್ಗೆ 10.30ಕ್ಕೆ ಕೊಂಕಣೆಯಲ್ಲಿ ಹಬ್ಬದ ಬಲಿಪೂಜೆ ಮಂಗಳೂರು ಧರ್ಮಾಧ್ಯಕ್ಷರಿಂದ.
ಜ.26 ಮಾರ್ಗದರ್ಶಿ ಮಾತೆಯ ಹಬ್ಬ ಮುಂಜಾನೆ 10.00 ಕೊಂಕಣೆಯಲ್ಲಿ ಹಬ್ಬದ ಬಲಿಪೂಜೆ ಉಡುಪಿ ಧರ್ಮಾಧ್ಯಕ್ಷರಿಂದ