ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ ಪ್ರಸಕ್ತ ವರ್ಷದ 9 ನೇ ಒಡ್ಡು ನಿರ್ಮಾಣ ಕಾರ್ಯಕ್ರಮವು ಅಶ್ವತ್ಥಪುರದ ಪಾದೆ ಮನೆ ಹೊನ್ನಪ್ಪ ಗೌಡರ ತೋಟದಲ್ಲಿ ಶನಿವಾರ ನೆರವೇರಿತು.
ತೆಂಕಮಿಜಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕ್ರಷ್ಣ ದೇವಾಡಿಗ, ಪಿಡಿಒ ಸಾಯೀಶ್ ಚೌಟ ಒಡ್ಡು ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಪಾದೆಮನೆ ಹೊನ್ನಪ್ಪ ಗೌಡ ,ಸಂಜೀವ ಗೌಡ, ಬಾಬು ಗೌಡ ಅತಿಥ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿ ಚಂದ್ರಶೇಖರ್ ಗೌಡ ಹಾಗೂ ಗುರುದೇವ.ಎನ್ ಮಾರ್ಗದರ್ಶನ ಮಾಡಿದರು.
ರಾಜೇಶ್ವರಿ ಇನ್ ಫ್ರಾಟೆಕ್ ನ ಆಡಳಿತ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ನಿರ್ಮಾಣಕ್ಕೆ ಸುಮಾರು 700 ಸಿಮೆಂಟ್ ಚೀಲಗಳನ್ನು ಒದಗಿಸಿ ಸಹಕರಿಸಿದರು. ಸುಮಾರು 60 ಎನ್.ಎಸ್.ಎಸ್. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.