ಕಾಸರಗೋಡು: ಗ್ರಹಿಣಿಯ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾದ ಘಟನೆ ಸೋಮವಾರ ಬದಿಯಡ್ಕದಲ್ಲಿ ನಡೆದಿದೆ.
ಮೃತಪಟ್ಟವರನ್ನು ಕರಿಂಬಿಲ ಬನಾರಿಯ ಜಯರಾಮ ಭಟ್ ರವರ ಪತ್ನಿ ಲಲಿತಾ (೫೮) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಮನೆಯಿಂದ ತೋಟಕ್ಕೆಂದು ತೆರಳಿದ್ದ ಈಕೆ ಮರಳಿ ಮನೆಗೆ ಬರದಿದ್ದುದರಿಂದ ಮನೆಯವರು ಶೋಧ ನಡೆಸಿದಾಗ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು, ಮನೆಯವರು ಮೇಲಕ್ಕೆತ್ತಿದರೂ ಆಗಲೇ ಮೃತಪಟ್ಟಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.