ಕಾಸರಗೋಡು: ಜ್ಯುವೆಲ್ಲರಿಯಿಂದ ಚಿನ್ನಾಭರಣ ಕಳವುಗೈದು ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ.
ನಗರದ ಅರಮನೆ ಜ್ಯುವೆಲ್ಲರಿಯಲ್ಲಿ ಶುಕ್ರವಾರ ರಾತ್ರಿ 7.30 ರ ಸುಮಾರಿಗೆ ಚಿನ್ನಾಭರಣ ಖರೀದಿ ಸೋಗಿನಲ್ಲಿ ಬಂದ ತಮಿಳುನಾಡಿನ ಯುವಕರಿಬ್ಬರು ಒಂದೂವರೆ ಪವನ್ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದರು.
ಪರಾರಿಯಾಗಿದ್ದ ಇಬ್ಬರನ್ನು ನಾಗರಿಕರ ನೆರವಿನಿಂದ ಪೊಲೀಸರು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಮಾಹಿತಿ ಕೆಲ ಹಾಕುತ್ತಿದ್ದಾರೆ.