News Kannada
Wednesday, September 28 2022

ಕರಾವಳಿ

ನೂತನ ಕೆಎಸ್ಆರ್ ಟಿಸಿ ಬಸ್ ಮಾರ್ಗಕ್ಕೆ ಚಾಲನೆ: ಕರ್ನಾಟಕದ ಬಸ್, ಕೇರಳದ ಮರ್ಕಝ್ ! - 1 min read

Photo Credit :

ನೂತನ ಕೆಎಸ್ಆರ್ ಟಿಸಿ ಬಸ್ ಮಾರ್ಗಕ್ಕೆ ಚಾಲನೆ: ಕರ್ನಾಟಕದ ಬಸ್, ಕೇರಳದ ಮರ್ಕಝ್ !

ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗ್ರಾಮೀಣ ಭಾಗ ಹಾಗೂ ಧಾರ್ಮಿಕ ಕೇಂದ್ರಗಳಿಗೆ ತೆರಳಲು ನೂತನ ಮಾರ್ಗಗಳಿಗೆ ಬಸ್ ಗಳನ್ನು ನೀಡಿದ್ದು, ಬಸ್ ಸಂಚಾರಕ್ಕೆ ನಿನ್ನೆ ಚಾಲನೆ ನೀಡಲಾಯಿತು.

ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮಡಿಕೇರಿಯಿಂದ ಕೋಝಿಕೋಡ್ ಗೆ ತೆರಳುವ ಎರಡು ಬಸ್ ಗಳಿಗೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾದ ಶೌಕತ್ ಆಲಿ ಚಾಲನೆ ನೀಡಿದರು.  

ಈ ಸಂದರ್ಭ ಮಾತನಾಡಿದ ಶೌಕತ್ ಆಲಿ ಮೂರ್ನಾಡು, ವಿರಾಜಪೇಟೆ, ಕುಟ್ಟ, ಮಾನಂದವಾಡಿ, ಕಾರಂದೂರು, ಮರ್ಕಝ್ ವಿಶ್ವ ವಿದ್ಯಾನಿಲಯದ ಮಾರ್ಗವಾಗಿ ಕೋಝಿಕೋಡ್ ಗೆ ಬಸ್ ತಲುಪಲಿದೆ ಎಂದರು.

ಧರ್ಮಸ್ಥಳದಿಂದ ಜಿಲ್ಲೆಯನ್ನು ಪ್ರವೇಶಿಸುವ ನೂತನ ಬಸ್ ಮಾರ್ಗವನ್ನು ಕೂಡ ಆರಂಭಿಸಲಾಗಿದ್ದು, ಈ ಬಸ್ ಬೆಳಗ್ಗೆ 7 ಗಂಟೆಗೆ ಧರ್ಮಸ್ಥಳದಿಂದ ಹೊರಟು ಮಂಗಳೂರು, ಮಡಿಕೇರಿ, ಸೋಮವಾರಪೇಟೆ, ಕೊಡ್ಲಿಪೇಟೆ ಮಾರ್ಗವಾಗಿ ಚೆನ್ನರಾಯಪಟ್ಟಣ ತಲುಪಲಿದೆ. ಧಾರ್ಮಿಕ ಕೇಂದ್ರ ಎಮ್ಮೆಮಾಡು ಕ್ಷೇತ್ರಕ್ಕೂ ಮಡಿಕೇರಿಯಿಂದ ನೂತನ ಬಸ್ ಮಾರ್ಗವನ್ನು ಕಲ್ಪಿಸಲಾಗಿದೆ. ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೋಮವಾರಪೇಟೆಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ನೂತನ ಬಸ್ ಮಾರ್ಗ 9.30 ಗಂಟೆಗೆ ಮಡಿಕೇರಿಗೆ ತಲುಪಲಿದೆ ಎಂದು ಮಾಹಿತಿ ನೀಡಿದರು.

ಸುಮಾರು 30 ಕ್ಕೂ ಅಧಿಕ ನೂತನ ಮಾರ್ಗಗಳ ರಹದಾರಿಗಾಗಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಕೆಎಸ್ಆರ್ ಟಿಸಿ ಮೂಲಕ ರಾಜ್ಯದ ಎಲ್ಲಾ ಭಾಗಗಳಲ್ಲಿ ನಗರ ಸಾರಿಗೆ ಬಸ್ ಗಳ ಸಂಚಾರ ಆರಂಭಗೊಂಡಿದೆ. ಆದರೆ ಮಡಿಕೇರಿ ಹಾಗೂ ಪುತ್ತೂರಿನಲ್ಲಿ ಕೆಲವು ತಾಂತ್ರಿಕ ಅಡಚಣೆಯಿಂದ ಸಂಚಾರ ವಿಳಂಬವಾಗಿದ್ದು, ಸಧ್ಯದಲ್ಲಿಯೇ ಇದಕ್ಕೂ ಚಾಲನೆ ನೀಡಲಾಗುವುದೆಂದು ಶೌಕತ್ ಆಲಿ ಭರವಸೆ ನೀಡಿದರು.

ಈ ಸಂದರ್ಭ ಕೆಎಸ್ಆರ್ ಟಿಸಿಯ ಮಡಿಕೇರಿ ಡಿಪೋ ವ್ಯವಸ್ಥಾಪಕರಾದ ಗೀತಾ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಖಾಲಿದ್ ಹಾಕತ್ತೂರು, ನಗರ ಕಾರ್ಯದರ್ಶಿ ಎಂ.ಎ.ಮುನೀರ್, ಪ್ರಮುಖರಾದ ಜಫ್ರುಲ್ಲಾ, ಶಾಫಿ, ಹಾರೀಸ್, ಎಂ.ಎ.ಮೊಹಿದು ಮತ್ತಿತರರು ಹಾಜರಿದ್ದರು.

ಕನರ್ಾಟಕದ ಬಸ್, ಕೇರಳದ ಮರ್ಕಝ್ ! : ಕೊಡಗು ಜಿಲ್ಲೆಯಲ್ಲಿ ಕೇರಳಿಗರ ಸಂಖ್ಯೆ ಹೆಚ್ಚು ಇರುವ ಕಾರಣ ಮಡಿಕೇರಿಯಿಂದ ಕೋಝಿಕೋಡ್ ಗೆ ತೆರಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎರಡು ಬಸ್ ಗಳನ್ನು ನಿಯೋಜಿಸಿರುವುದು ಸ್ವಾಗತಾರ್ಹ. ಆದರೆ ಕರ್ನಾಟಕದ ಬಸ್ ಗೆ ಕೇರಳ ಮೂಲದ ಮರ್ಕಝ್ ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಿದ್ದು ಮಾತ್ರ ಸಾರ್ವಜನಿಕರಿಗೆ ಸರಿ ಕಾಣಲಿಲ್ಲ. ಬಸ್ ನಿಲ್ದಾಣದಲ್ಲಿದ್ದ ಕೆಲವರು ಈ ಬಗ್ಗೆ ಗೊಣಗಿಕೊಂಡರು. ಕೇರಳದಲ್ಲೊಂದು ಮರ್ಕಝ್ ವಿಶ್ವ ವಿದ್ಯಾನಿಲಯವಿದ್ದು, ಬಸ್ ಈ ಶಿಕ್ಷಣ ಸಂಸ್ಥೆಯ ಮಾರ್ಗದಲ್ಲೇ ಸಾಗುವುದರಿಂದ ನಾಮಕರಣ ಕೇರಳದ್ದೇ ಆಗಿರಬಹುದೆಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದರು.

See also  ಖಾಸಗಿ ಬಸ್-ಟಿಪ್ಪರ್ ಮುಖಾಮುಖಿ ಡಿಕ್ಕಿ: ಯುವತಿ ಸಾವು

ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಕೂಡ ಕೆಎಸ್ಆರ್ ಟಿಸಿ ನಿರ್ದೇಶಕರಾದ ಶೌಕತ್ ಆಲಿ ಅವರಿಗೆ ಕಿವಿ ಮಾತು ಹೇಳಿದರು. ಇದು ಕರ್ನಾಟಕದ ಬಸ್, ಎಲ್ಲವನ್ನು ಕನ್ನಡದಲ್ಲೇ ಬರೆಯಿರಿ, ಮಲಯಾಳಕ್ಕೆ ಅವಕಾಶ ನೀಡಬೇಡಿ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು