ಕಾಸರಗೋಡು: ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ 19 ಕಿಲೋ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ತಿರುವನಂತಪುರದ ರತೀಶ್(30) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದನು. ಅಬಕಾರಿ ದಳದ ಸಿಬಂದಿಗಳಿಗೆ ಲಭಿಸಿದ ಖಚಿತ ಮಾಗಿತಿಯಂತೆ ಕಾರ್ಯಾಚರಣೆಯಿಂದ ಈತನನ್ನು ಕುಂಬಳೆ ರೈಲು ನಿಲ್ದಾಣ ಪರಿಸರದಿಂದ ಈತನನ್ನು ಬಂಧಿಸಲಾಯಿತು. ಕಾಸರಗೋಡಿನ ಹಲವಡೆಗೆ ವಿತರಿಸಲು ಗಾಂಜಾ ತಂದಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ.