News Kannada
Tuesday, November 29 2022

ಕರಾವಳಿ

ಫೆ.10 ರಂದು ಸ್ನೇಹ ಶಾಲೆಗೆ ‘ಭಾರತರತ್ನ’ ಸಿ.ಎನ್.ಆರ್. ರಾವ್ ಭೇಟಿ - 1 min read

Photo Credit :

ಫೆ.10 ರಂದು ಸ್ನೇಹ ಶಾಲೆಗೆ 'ಭಾರತರತ್ನ' ಸಿ.ಎನ್.ಆರ್. ರಾವ್ ಭೇಟಿ

ಸುಳ್ಯ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ ಗೌರವಕ್ಕೆ ಪಾತ್ರರಾದ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ (ಸಿ.ಎನ್.ಆರ್.ರಾವ್) ಅವರು ಫೆಬ್ರವರಿ 10 ರಂದು ಸುಳ್ಯದ ಸ್ನೇಹ ಶಾಲೆಗೆ ಆಗಮಿಸಲಿದ್ದಾರೆ ಎಂದು ಸ್ನೇಹ ಶಿಕ್ಷಣ ಸಂಸೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸರ್. ಸಿ.ವಿ. ರಾಮನ್ ಮತ್ತು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಬಳಿಕ ಭಾರತರತ್ನ ಪ್ರಶಸ್ತಿ ಪಡೆದ ಮೂರನೇ ವಿಜ್ಞಾನಿಯಾದ ಇವರು ತಮಗೆ ಪ್ರಶಸ್ತಿ ಬಂದಾಗ ತಾವು ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಪಡೆದುದೇ ಈ ಎತ್ತರಕ್ಕೆ ಏರಲು ಕಾರಣವೆಂದು ಹೇಳಿದ್ದ ಅವರು ಕನ್ನಡ ಮಾಧ್ಯಮವೇ ಮೂಲ ಶಿಕ್ಷಣಕ್ಕೆ ಸೂಕ್ತವೆಂಬುದಾಗಿ ಹೇಳಿದ್ದರು. ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಿ ಕನ್ನಡ ಮಾಧ್ಯಮ ಶಾಲೆಯಾದ ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವಂತೆ ಆಮಂತ್ರಿಸಿದ್ದೆವು. ಈ ಆಮಂತ್ರಣವನ್ನು ಮನ್ನಿಸಿ ಶಾಲೆಗೆ ಭೇಟಿ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಅವರು ಇಲ್ಲಿನ ಶೈಕ್ಷಣಿಕ ವ್ಯವಸ್ಥೆಗಳಾದ ಗುರುಕುಲ, ಚೌಕಿ, ಕಲಾಶಾಲೆ, ವೃತ್ತಾಕಾರದ ಕೊಠಡಿಗಳು, ಬಯಲು ಸೂರ್ಯಾಲಯವನ್ನು ವೀಕ್ಷಿಸುವುದಲ್ಲದೆ ನೂತನವಾಗಿ ನಿರ್ಮಿಸಿರುವ “ವಿಜ್ಞಾನ ಉದ್ಯಾನ” ವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಬಯಲು ರಂಗ ಮಂದಿರದಲ್ಲಿ “ಶಿಕ್ಷಣ-ವಿಜ್ಜಾನ-ಸಂಶೋಧನೆ” ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಇತ್ತೀಚೆಗೆ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಸ್ನೇಹ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಗಿರೀಶ್ ಭಾರದ್ವಾಜರಿಗೆ ಗೌರವಾರ್ಪಣೆ ನಡೆಯಲಿದೆ. ಅಲ್ಲದೆ ಡಾ. ಚಂದ್ರಶೇಖರ ದಾಮ್ಲೆಯವರು ಬರೆದ `ಡೋಂಟ್ ಸೇ ಮೈ ಚೈಲ್ಡ್ ಈಸ್ ಮೈಲ್ಡ್’ ಕೃತಿಯನ್ನು ಇಂದುಮತಿ ರಾವ್ ಅವರು ಬಿಡುಗಡೆ ಮಾಡಲಿದ್ದಾರೆ.

ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಳ್ಯ ತಾಲೂಕಿನ ಎಲ್ಲಾ ಪದವಿಪೂರ್ವ ಕಾಲೇಜುಗಳ ಆಯ್ದ 250 ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ ನಿಡಲಾಗುತ್ತಿದ್ದು ಆಸಕ್ತ ವಿಜ್ಞಾನ ಶಿಕ್ಷಕರು, ಪ್ರಾಧ್ಯಾಪಕರುಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ವಿದ್ಯಾಶಾಂಭವ ಪಾರೆ, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ವಿಜ್ಞಾನ  ಶಿಕ್ಷಕ ರಘುರಾಮ ಭಟ್ ಉಪಸ್ಥಿತರಿದ್ದರು.

See also  ಸಿಇಟಿ-ಮೆಡಿಕಲ್ ಫಲಿತಾಂಶ: ಆಳ್ವಾಸ್ ನ ಅನಂತ್ ಗೆ ಪ್ರಥಮ ರ್ಯಾಂಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು