ಕಾಸರಗೋಡು: ಚಿನ್ನಾಭರಣ ನೀಡುವುದಾಗಿ ಆಮಿಷ ತೋರಿಸಿ ಮಲಪ್ಪುರಂ ನಿವಾಸಿಯಿಂದ 28 ಲಕ್ಷ ರೂ. ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಆದೂರಿನ ಮುಹಮ್ಮದ್ ಶಾಫಿ (೩೮) ಮತ್ತು ತಿರುವನಂತಪುರದ ರಾಧಾಕೃಷ್ಣ ಮೆನೋನ್ (೬೦) ಎಂದು ಗುರುತಿಸಲಾಗಿದೆ.
ಮಲಪ್ಪುರಂ ನ ಫಾಸಿಲ್ ಎಂಬವರಿಂದ ಹಣ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವರನ್ನು ಬಂಧಿಸಲಾಗಿದೆ.
ತೆರಿಗೆ ರಹಿತ ಹಳೆ ಚಿನ್ನಾಭರಣ ನೀಡುವುದಾಗಿ ನಂಬಿಸಿ ಹಣ ದೋಚಿದ್ದರು. ಈ ಬಗ್ಗೆ ಹೊಸದುರ್ಗ ಪೊಲೀಸರಿಗೆ ಲಭಿಸಿದ ದೂರಿನಂತೆ ಇಬ್ಬರನ್ನು ಬಂಧಿಸಲಾಗಿದೆ.