News Kannada
Tuesday, January 31 2023

ಕರಾವಳಿ

ಬೈಕ್, ಜೀಪು ಡಿಕ್ಕಿ: ಸವಾರ ಮೃತ್ಯು, ಸಹಸವಾರನಿಗೆ ತೀವ್ರ ಗಾಯ

Photo Credit :

ಬೈಕ್, ಜೀಪು ಡಿಕ್ಕಿ: ಸವಾರ ಮೃತ್ಯು, ಸಹಸವಾರನಿಗೆ ತೀವ್ರ ಗಾಯ

ಪುತ್ತೂರು: ಬೆಟ್ಟಂಪಾಡಿ ಆರ್ಲಪದವು ಸಮೀಪ ಫೆ. 13ರಂದು ಬೈಕ್ ಮತ್ತು ಜೀಪು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದು, ಸಹಸವಾರ ತ್ರೀವ್ರ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಮೂಲತಃ ಗದಗ ಜಿಲ್ಲೆಯವರಾಗಿದ್ದು ಆದೂರಿನ ಕಲ್ಲಿನಕೋರೆಯೊಂದರಲ್ಲಿ ಕೂಲಿ ಕಾರ್ಮಿಕರಾಗಿದ್ದ ವೆಂಕಪ್ಪ(30ವ)ರವರು ಮೃತಪಟ್ಟವರು. ಬೈಕ್ ಹಿಂಬದಿ ಸವಾರ ಗುಮ್ಮಟಗದ್ದೆ ಹೊಸಗದ್ದೆ ನಿವಾಶಿ ಶೇಷಪ್ಪ ಪೂಜಾರಿಯವರ ಪುತ್ರ ಜಯಪ್ರಕಾಶ್ ಪೂಜಾರಿ(34ವ)ರವರು ತೀವ್ರ ಗಾಯಗೊಂಡವರು. ಜಯಪ್ರಕಾಶ್ ಪೂಜಾರಿಯವರು ಆರ್ಲಪದವಿಗೆ ಕೆಲಸದ ನಿಮಿತ್ತ ಹೋಗಿ ಮನೆ ಕಡೆಗೆ ಹಿಂದಿರುಗಲು ಆರ್ಲಪದವಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಪರಿಚಯಸ್ಥ ವೆಂಕಪ್ಪರವರು ಅಲ್ಲಿಗೆ ಬೈಕ್(ಕೆ.ಎಲ್. 14 ಪಿ 3387)ರಲ್ಲಿ ಬಂದು ಜಯಪ್ರಕಾಶ್ ರವರನ್ನು ಜೊತೆಯಲ್ಲಿ ಕುಳ್ಳಿರಿಸಿ ಹೊರಟ್ಟಿದ್ದರು.

ಪಾಣಾಜೆ ಉಡ್ಡಂಗಲ ಎಂಬಲ್ಲಿ ತಿರುವು ರಸ್ತೆಗೆ ತಲುಪಿದಾಗ ವಿರುದ್ಧ ದಿಕ್ಕಿನಿಂದ ಬಂದ ಅಬ್ದುಲ್ ರಜಾಕ್ ಎಂಬವರು ಚಲಾಯಿಸುತ್ತಿದ್ದ ಜೀಪು ಕೆ.ಎ.30 ಎಮ್.1261) ಬೈಕ್  ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ವೆಂಕಪ್ಪ ಮತ್ತು ಜಯಪ್ರಕಾಶ್ರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತರಲಾಯಿತ್ತಾದರೂ ವೆಂಕಪ್ಪರವರು ಮೃತಪಟ್ಟಿದ್ದರು. ತೀವ್ರ ಗಾಯಗೊಂಡ ಜಯಪ್ರಕಾಶ್ರವರನ್ನು ಇಲ್ಲಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

See also  ಬಂಟ್ವಾಳದಲ್ಲಿ ತಂಡದಿಂದ ಯುವಕನ ಕೊಲೆ ಯತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು